Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್

IMG_2130

ನಮ್ಮ ಪ್ರತಿನಿಧಿ ವರದಿ
ಮೂಡಬಿದಿರೆ: ಪ್ರಜಾಪ್ರಭುತ್ವದ ಗೌರವಯುತವಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ವೈಫಲ್ಯದ ವಿರುದ್ಧ ಧಾರ್ಮಿಕ ಭಾವನೆಯುಳ್ಳವರು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ನಡೆಯುವಾಗ ಕೈಕಟ್ಟಿ ಕೂರುವ ಜಾಯಮಾನವೇ ಇಲ್ಲ. ಹಿಂದೂ ಒಂದು ಎಂಬ ಭಾವನೆಯಿಂದ ಹೋರಾಟ ಮಾಡುವ ಸ್ಥಿತಿ ಉದ್ಭವವಾಗಿದೆ ಎಂದು ಹಿಂದೂ ಮುಖಂಡ ಸುದರ್ಶನ ಎಂ ಗುಡುಗಿದರು.

shabarimale

ಮೂಡಬಿದಿರೆಯ ಬಸ್ ನಿಲ್ದಾಣದಲ್ಲಿ `ಶಬರಿಮಲೆ ಉಳಿಸಿ ಸಮಿತಿ ಮೂಡಬಿದಿರೆ’ಹಮ್ಮಿಕೊಂಡ ಬೃಹತ್ ಪಾದಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಸಮಾನತೆಯ ಬಗ್ಗೆ ಮಾತನಾಡುವ ಬುದ್ದಿಜೀವಿಗಳು, ಅವರಿಗೆ ಕುಮ್ಮಕ್ಕು ನೀಡುವ ಕಾಣದ ಕೈಗಳು ಇಂದು ಭಾರತದಲ್ಲಿರುವ ಸಮಾನತೆಯ ಬಗ್ಗೆ ಅರ್ಥೈಸಿಕೊಳ್ಳಬೇಕು. ಈ ದೇಶ ಮಾತೆಯರಿಗೆ ಅಗ್ರಸ್ಥಾನ ನೀಡಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಮಹಿಳಾ ಶಕ್ತಿ ಜಾಗೃತವಾದರೆ ಅದು ದುರ್ಗಾ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಚಿಂತನೆಯನ್ನು ಅರ್ಥೈಸಿಕೊಳ್ಳುವಂತೆ ಎಚ್ಚರಿಸಿದರು. ಕಮ್ಯೂನಿಸ್ಟ್ ಕೇಂದ್ರಿತ ಕೇರಳದ ರಾಜ್ಯ ಸರ್ಕಾರ ಹಿಂದೂಗಳ ಭಾವನೆಯನ್ನು ಪ್ರಶ್ನಿಸುವ ಕಾರ್ಯವನ್ನು ಮಾಡುತ್ತಿದೆ. ಸುಪ್ರೀಂ  ಕೋರ್ಟ್  ತೀರ್ಪನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಹುನ್ನಾರ ನಡೆಸುತ್ತಿದೆ ಇದು ಖಂಡನೀಯ ಎಂದರು. ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರಿಗೆ ಪ್ರವೇಶ ಈ ಹಿಂದಿನಿಂದಲೂ ಕಲ್ಪಿಸಲಾಗಿದೆ. ಹತ್ತು ವರ್ಷದೊಳಗಿನ ಹಾಗೂ ಐವತ್ತು ವರ್ಷ ಮೀರಿದ ಮಹಿಳೆಯರಿಗೆ ಇಲ್ಲಿ ಪ್ರವೇಶವಿದೆ. ಆ ಮಧ್ಯದ ವಯೋಮಾನದವರನ್ನು ಪ್ರವೇಶಕ್ಕೆ ಅವಕಾಶ ನೀಡದಿರುವುದರ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಭಾವನೆಗಳಿವೆ ಎಂಬುದನ್ನು ಬುದ್ದಿಜೀವಿಗಳು ಅರ್ಥಮಾಡಿಕೊಳ್ಳಲಿ ಎಂದರು.

IMG_2030

ಅಹಂಕಾರ ಸಲ್ಲ: ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ, ಶ್ರದ್ಧಾಕೇಂದ್ರಕ್ಕೆ ಪ್ರವೇಶಿಸುವ ಹೇಳಿಕೆ ನೀಡಿದ ತೃಪ್ತಿ ದೇಸಾಯಿ ವಿರುದ್ಧ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಕಿಡಿಕಾರಿದರು. ಸೋಶಿಯಲ್ ಮೀಡಿಯಾ ಮೂಲಕ `ಪ್ರೀತಿ ಪ್ರೇಮದ ನಾಟಕವಾಡಿ’ ಮೋಸದ ಮದುವೆಯಾಗಿ ವಿಚ್ಛೇದನ ಪಡೆಯುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳ ಬಾಳು ಬೆಳಗಿಸುವ ಕಾರ್ಯವನ್ನು ಇಂತಹವರು ಮಾಡಲಿ ಎಂದು ಸವಾಲೆಸೆದರು. ಧಾಮರ್ಿಕ ಭಾವನೆಗಳನ್ನು ಕೆರಳಿಸುವ ಹೀನ ಕೃತ್ಯ ನಡೆಸುವುದು ಸರಿಯಲ್ಲ ಎಂದವರು ಹೇಳಿದರು.
ಮೂಡಬಿದಿರೆ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಹಿರಿಯ ಗುರುಸ್ವಾಮಿ ಶಶಿಗುರು ಪ್ರತಿಭಟನಾ ಸಭೆಯನ್ನುದ್ದೇಸಿ ಮಾತನಾಡಿದರು.ಬಡಗುಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪ್ರಸಾದ್ ಭಟ್ ಸೇರಿದಂತೆ ಗುರುಸ್ವಾಮಿಗಳು, ಪುರಸಭಾ ಸದಸ್ಯರು, ಶಬರಿಮಲೆ ಕ್ಷೇತ್ರದ ಅಪಾರ ಭಕ್ತವೃಂದ ಪ್ರತಿಭಟನಾ ಸಭೆಗೆ ಸಾಕ್ಷಿಯಾಯಿತು.