Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಕಳಚಿದ ಮೆಡಿಕಲ್ ಮಾಫಿಯಾದ ಮುಖವಾಡ

#drug#mafia
– ಪದ್ಮನಾಭ ಅಡಿಗ 
ಹೀಗೊಂದು ಲೆಕ್ಕಾಚಾರ
  ಬೇರೆ  ಮೆಡಿಕಲ್ ನಲ್ಲಿ ನನ್ನ ತಂದೆಯ ಒಂದು ಬಿಪಿ ಮಾತ್ರೆಗೆ 7.6₹ . ನನ್ನ ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 5.8₹.  ಜನ್ ಔಷಧಿ ಕೇಂದ್ರದಲ್ಲಿ
ತಂದೆಯ ಒಂದು ಬಿಪಿ ಮಾತ್ರೆಗೆ 2.8₹ . ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 0.9₹ .  ನಾನು ಇಬ್ಬರಿಗೂ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆ ತಂದಾಗ , ಬೇರೆ ಮೆಡಿಕಲ್ ನಲ್ಲಿ  1340₹ ಹಾಗೂ ಜನ್ ಔಷಧಿಯಲ್ಲಿ 370₹  ಎರಡಕ್ಕೂ ಇರುವ ವ್ಯತ್ಯಾಸ 1340₹ – 370₹= 970₹ , ಸರಿಸುಮಾರು  ಒಂದು ಸಾವಿರ ರೂಗಳ ವ್ಯತ್ಯಾಸ.  ಹಾಗಾದರೆ ಒಂದು  ವರ್ಷಕ್ಕೆ “3880₹”.  ( ನಾವು ಈವರೆಗೆ ಮಾತ್ರೆ ತರುತ್ತಿದ್ದ ಮೆಡಿಕಲ್ ಇರುವುದು ಹತ್ತಿರದ ಶಂಕರನಾರಾಯಣದಲ್ಲಿ (4km), ಆದರೆ ಜನ್ ಔಷಧಿ ಕೇಂದ್ರ ಇರುವುದು ಕುಂದಾಪುರದಲ್ಲಿ(20km). ನಾನು ಈ ಕಾರಣಕ್ಕಾಗಿಯೇ ಕುಂದಾಪುರಕ್ಕೆ ಹೋದರೂ ಅಬ್ಬಬ್ಬಾ ಅಂದರೆ ತಗಲುವ  ಖರ್ಚು  200₹ . )  ಇಷ್ಟು ವರ್ಷಗಳಿಂದ ಬಿಪಿ – ಶುಗರ್ ಗಳ ಹೆಸರಿನಲ್ಲಿ ಮೆಡಿಕಲ್ ಗಳ ಮೂಲಕ ಔಷಧ ಕಂಪೆನಿಗಳು  ಜನರ ಹಣವನ್ನು ದೋಚುತ್ತಿದ್ದ ಹಣ…ಎಷ್ಟಾಗಬಹುದು…ಊಹಿಸಲೂ ಕಷ್ಟಸಾಧ್ಯ!
#drug#mafia1
         ಕೇವಲ ಇಬ್ಬರಿಗೆ ಒಂದು ವರ್ಷಕ್ಕೆ 3880₹ ಆದರೆ ಭಾರತದಲ್ಲಿ ಕಡಿಮೆಯೆಂದರೂ ಕೇವಲ 40ಲಕ್ಷ ಜನ ಬಿಪಿ ಮಾತ್ರೆಯೊಂದನ್ನೇ ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಅದರ ಮೊತ್ತ…(ಮಾತ್ರೆಯ ನಿಜವಾದ  ಖರ್ಚಲ್ಲ) ಅಂದರೆ ಮೆಡಿಕಲ್ ಮಾಫಿಯಾ ಎಂಬ ಮಾಯಾಜಾಲ ಜನರನ್ನು ಸುಲಿಯುತ್ತಿದ್ದ ಹಣದ ಮೊತ್ತ,  77600000000 ₹ .(ಏಳುಸಾವಿರದ ಏಳುನೂರಾ ಎಪ್ಪತ್ತಾರು ಕೋಟಿ )ಇದು ಕೇವಲ ಒಂದು ಮಾತ್ರೆಯಿಂದ ದೋಚಿದ ಹಣ ಅಂದರೆ ನನ್ನಂತಹ ಕೋಟಿ ಜನರ ಒಂದು ವರ್ಷದ ದುಡಿಮೆಗೆ ಸಮ , ಅಥವಾ ಭಾರತದ ನೂರಿಪ್ಪತ್ತೈದು ಕೋಟಿ (125)ಜನರಿಗೆ, ಸುಮಾರು 2-3 ತಿಂಗಳುಗಳ ಕಾಲ  ಉಚಿತವಾಗಿ ಊಟ  ಕೊಡುವಷ್ಟು …!
 ಹಾಗಾದರೆ ಭಾರತದಲ್ಲಿ ಎಷ್ಟು ಕೋಟಿ ಜನ, ಎಷ್ಟು ವರ್ಷಗಳಿಂದ , ಇಂತಹ ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಹುದು..‌‌‌ಅದರ ಮೊತ್ತ ಎಷ್ಟಾಗಬಹುದು.
( ಹಾಗೇ ಆಲೋಚಿಸಿದರೆ… ಸುಮಾರು   40 ಕೋಟಿ ಜನ ಕೇವಲ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಒಂದು ವರ್ಷದ ಮೊತ್ತ  7.76e11₹. ಹಾಗಾದರೆ  5 ಮಾತ್ರೆ  5ವರ್ಷಗಳಿಂದ ಎಂದು ಲೆಕ್ಕ ಮಾಡಿದಾಗ ಅದರ ಮೊತ್ತ 1.94e13 ₹ )(ಈ ಮೊತ್ತಗಳನ್ನು Calculator ನಲ್ಲಿ ಕಾಣಬಹುದು.)ಹಾಗೆ ಬಿಪಿ,ಶುಗರ್ , ಕ್ಯಾಲ್ಸಿಯಂ ಹೀಗೆ ಹತ್ತು ಹಲವಾರು ಕಾಯಿಲೆಗಳ ಸೋಗಿನಲ್ಲಿ ಜನರನ್ನು ದೋಚುತ್ತಿದ್ದ , ದೋಚುತ್ತಿರುವ ನಾವು ಹೀಗೇ ಮುಂದುವರೆದರೆ ಮುಂದೆಯೂ ದೋಚಬಹುದಾದ ಹಣದ ಮೊತ್ತ ಎಷ್ಟಾಗಬಹುದೆಂದು ಊಹಿಸಲೂ ಅಸಾಧ್ಯ. )
  ಕೊನೆಯ ಮಾತು:
ಸಾಧ್ಯವಾದಷ್ಟು ಜನ್ ಔಷಧಿ ಕೇಂದ್ರದಲ್ಲಿ ಔಷಧಗಳನ್ನು ಸ್ವೀಕರಿಸಿ , ನಿಮ್ಮ ಊರಿನಲ್ಲಿಯೂ ಕೇಂದ್ರದ ಸ್ಥಾಪನೆಗೆ ಮನವಿ ಸಲ್ಲಿಸಿ.
     (ವಿ .ಸೂ . ಕೇವಲ ಸಾಮಾನ್ಯ ವ್ಯಕ್ತಿಯಾಗಿ ಕೇಂದ್ರ ಸರಕಾರದ ಈ ಜನ್ ಔಷಧಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಬರೆದಂಥ ಲೇಖನವೇ , ಹೊರತಾಗಿ ಯಾವುದೇ ಪಕ್ಷ , ವ್ಯಕ್ತಿಯ ಹೊಗಳಿಕೆಯ   ಅಥವಾ ಪ್ರಚಾರದ ಕುರಿತಾದದ್ದಲ್ಲ.)