Headlines

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಗೆ ಆಳ್ವಾಸ್ ಕ್ರೀಡಾಳುಗಳು * ಜಾಗೃತಿ ಪ್ರಜ್ಞೆ ಮೂಡಿಸಿದ ಜವನೆರ್ ಬೆದ್ರ * ಶಾಸಕರ ಮಾನವೀಯ ಸ್ಪಂದನೆ * ಜವನೆರ್ ಬೆದ್ರದ ಸಾಧನೆ ಇತರರಿಗೂ ಮಾದರಿ * ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ * ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು!! * ಸರ್ಕಾರ ಉಳಿಸಲು ವಿಶೇಷ ಪೂಜೆ! * `ನಾಡ ಪ್ರೇಮಿ’ಖ್ಯಾತಿಯ ಬಳ್ಳುಳ್ಳಾಯ ಇನ್ನಿಲ್ಲ * ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! *

ಕರಾವಳಿಯಲ್ಲಿ ಮತ್ತೆ ಮಳೆಯಾರ್ಭಟ

#vaarte#heavy#rain#moodbidri

ನಮ್ಮ ಪ್ರತಿನಿಧಿ ವರದಿ

ಮತ್ತೆ ಮಳೆರಾಯನ ಆರ್ಭಟ ತಾರಕಕ್ಕೇರಿತು. ಕಳೆದೆರಡು ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿತ್ತು. ಶುಕ್ರವಾರ ದಿನಪೂರ್ತಿ ಸುರಿದ ಭಾರೀ ಮಳೆಗೆ ಜನತೆ ಅಕ್ಷರಶಃ ದಿಕ್ಕೆಟ್ಟು ಹೋಗಿದ್ದರು. ಶುಕ್ರವಾರ ರಾತ್ರಿಯೂ ಮಳೆಯಬ್ಬರ ಜೋರಾಗಿಯೇ ಮುಂದುವರಿದಿತ್ತು. ಶನಿವಾರವೂ ಮಳೆ ತನ್ನ ಆರ್ಭಟ ಕಡಿಮೆಮಾಡದೆ ದಿನಪೂರ್ತಿ ಸುರಿಯಿತು. ತತ್ ಪರಿಣಾಮ ಮತ್ತೆ ಮೂಡಬಿದಿರೆಯ ಹಲವೆಡೆಗಳಲ್ಲಿ ಕೃತಕ ನೆರೆಭೀತಿ ಎದುರಾಯಿತು. ಪರಂಬೋಕು ತೋಡುಗಳು ಉಕ್ಕಿ ಹರಿದವು. ತಗ್ಗು ಪ್ರದೇಶಗಳು ಜಲಾವೃತಗೊಂಡವು.

1ಮೂಡಬಿದಿರೆಯ ನಗರ ವ್ಯಾಪ್ತಿಯೂ ಸೇರಿದಂತೆ ಹೊರವಲಯಗಳಲ್ಲಿ ನೀರು ರಸ್ತೆಯಲ್ಲಿಯೇ ಸಂಚರಿಸಿದ ಬಗ್ಗೆ ಹಲವು ಕಡೆಗಳಿಂದ ಮಾಹಿತಿಗಳು ಲಭ್ಯವಾದವು. ಅಸಮರ್ಪಕ ಚರಂಡಿ ವ್ಯವಸ್ಥೆ, ಗುಡ್ಡಜರಿದು ಮಣ್ಣು ಚರಂಡಿಸೇರಿ ಮಳೆನೀರು ಹರಿದುಹೋಗಲು ತೀವ್ರ ತೊಡಕಾದ ವಿದ್ಯಮಾನಗಳು ಇಡೀ ಮೂಡಬಿದಿರೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಂಭವಿಸಿದವು.
ಮೂಡಬಿದಿರೆಯ ಪೊನ್ನಚ್ಚಾರಿಯಲ್ಲಿ ಶುಕ್ರವಾರ ಶನಿವಾರ ಸುರಿ

ದ ಭಾರೀ ಮಳೆಯಿಂದಾಗಿ ರಾಜಕಾಲುವೆಯ ನೀರು ವಾಸ್ತವ್ಯವಿರುವ ವಸತಿ ಸಮುಚ್ಛಯವನ್ನಾವರಿಸಿದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಪುಚ್ಚಮೊಗರಿನ ಅಣೆಕಟ್ಟಿನ ಕೆಳಭಾಗದಲ್ಲಿ ಭರ್ಜರಿ ನೀರ ಹರಿವು ಕಂಡುಬಂತು. ಭಾರೀ ನೀರಿನಿಂದ ನದೀ ಪಾತ್ರಗಳು ಕೆಲವು ಕಡೆಗಳಲ್ಲಿ ಜಲಾವೃತಗೊಂಡಿದ್ದವು. ಮೂಡಬಿದಿರೆ ಬೆಳ್ತಂಗಡಿ ಗಡಿಭಾಗದ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕೋಡಿಯಲ್ಲೂ ಭಾರೀ ನೀರು ನದಿಯಿಂದ ಉಕ್ಕಿ ಬಂದ ಪರಿಣಾಮ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಖಾಸಗೀ ಬಸ್ ಸಂಚಾರ ಈ ಭಾಗದಲ್ಲಿದ್ದು ರಸ್ತೆ ಜಲಾವೃತಗೊಂಡ ಹಿನ್ನಲೆಯಲ್ಲಿ ತೊಂದರ ಅನುಭವಿಸುವಂತಾಯಿತು.
ಶಾಲೆಗಳಿಗೆ ರಜೆ: ಜಿಲ್ಲೆಯಲ್ಲಿ ವರ್ಷಧಾರೆ ಹೆಚ್ಚಿದ ಪರಿಣಾಮ ಜಿಲ್ಲಾಡಳಿತದ ಆದೇಶದಂತೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮೂಡಬಿದಿರೆ ವಲಯದ ಶಾಲೆಗಳು ಸರ್ಕಾರಿ ಆದೇಶದಂತೆ ಮುಚ್ಚಿದ್ದವು.