Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಕನ್ನಡ ನಾಡಿನ ದೀಮಂತ ಪತ್ರಕರ್ತ ಗುಲ್ವಾಡಿ

#santhoshkumar #gulwadi#mohanalva#HAREESH ADHUR

ನಮ್ಮ ಪ್ರತಿನಿಧಿ ವರದಿ
ಕನ್ನಡ ನಾಡು ಕಂಡ ದೀಮಂತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರು. ತರಂಗ ವಾರಪತ್ರಿಕೆಯನ್ನು ಪ್ರತಿಯೊಂದು `ಮನೆ-ಮನ’ಕ್ಕೆ ತಲುಪುವಂತೆ ಶ್ರಮವಹಿಸಿ ಯಶ ಸಾಧಿಸಿದ ಹೆಗ್ಗಳಿಕೆ ಗುಲ್ವಾಡಿಯವರದ್ದು. ಅವರೊಬ್ಬ ಸಾಮಾನ್ಯ ಪತ್ರಕರ್ತರಾಗಿರಲಿಲ್ಲ. ಬದಲಾಗಿ ಅಸಾಮಾನ್ಯ ಬರಹಗಾರರೂ ಹೌದು. ದೇಶ ವಿದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ ಗುಲ್ವಾಡಿಯವರದ್ದು ಸರಳ ಸ್ವಭಾವ. ತಮ್ಮ ವಿಭಿನ್ನ ಶೈಲಿ, ಸಂಪಾದಕೀಯ ಬರಹದ ಮೂಲಕ ಮನಮುಟ್ಟುವ ಬರವಣಿಗೆ ನೀಡಿದ್ದು ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಪತ್ರಕರ್ತರು ಮೂಡಬಿದಿರೆ ಪ್ರಸ್ತುತಿ ಪಡಿಸುವ ಪತ್ರಿಕಾ ದಿನಾಚರಣೆ ಅಂಗವಾಗಿ ಜುಲೈ 15ರಂದು ನಡೆಸಲುದ್ದೇಶಿಸಿದ ಸಂತೋಷ್ ಕುಮಾರ್ ಗುಲ್ವಾಡಿ `ನೆನಪು’ … ಅಂತರಂಗ- ಬಹಿರಂಗ ಇದರ ಆಮಂತ್ರಣ ಪತ್ರಿಕೆಯನ್ನು `ವಿದ್ಯಾಗಿರಿ’ಯಲ್ಲಿ ಶುಕ್ರವಾರ ಬಿಡುಗಡೆ ಗೊಳಿಸಿ ಮಾತನಾಡಿದರು.
ಮೂಡಬಿದಿರೆಗೂ ಗುಲ್ವಾಡಿ ಅವರಿಗೂ ಅವಿನಾಭಾವ ಸಂಬಂಧವಿದೆ ಎಂದು ನೆನಪಿಸಿದ ಡಾ.ಆಳ್ವರು ವಾರಪತ್ರಿಕೆಯೊಂದು ನವೀನ ರೀತಿಯಲ್ಲಿ ರೂಪಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆಂದರು. ಅಂತಹ ಅಪರೂಪದ ವ್ಯಕ್ತಿಯ ಸಂಸ್ಮರಣೆ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನಾರ್ಹ ಎಂದರು.
ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಘಟನೆಯ ಸದಸ್ಯರಾದ ಪತ್ರಕರ್ತ ಕೃಷ್ಣಕುಮಾರ್, ಪತ್ರಕರ್ತ ಹರೀಶ್ ಕೆ.ಆದೂರು ವೇದಿಕೆಯಲ್ಲಿದ್ದರು.