Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಕಥೋಲಿಕ್ ಸಮಾಜೋತ್ಸವ

Catholic Samajothsava #moodbidri

ಮೂಡುಬಿದಿರೆ : ಕೆಥೋಲಿಕ್ ಸಭಾ ಮಂಗ್ಳೂರ್ ಪ್ರದೇಶ(ರಿ.) ಮೂಡುಬಿದಿರೆ ವಲಯ ಸಮಿತಿ ಆಶ್ರಯದಲ್ಲಿ ಬೆಳ್ಳಿ ಹಬ್ಬ ಸಮಾರೋಪ ಸಮಾರಂಭದ ಪ್ರಯುಕ್ತ ಆಯೋಜಿಸಿದ ಕೆಥೋಲಿಕ್ ಸಮಾಜೋತ್ಸವ ಮೂಡಬಿದಿರೆ ಸಮೀಪದ ಆಲಂಗಾರ್ ಚರ್ಚ್  ವಠಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜ ಅಧ್ಯಕ್ಷತೆಯಲ್ಲಿ ಭಾನುವಾರ ಸಾಯಂಕಾಲ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಭಿಷಪ್ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜಾ ಅವರು ದೀಪ ಬೆಳಗಿಸಿ, ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ  ಗುಮಟೆ ಬಾರಿಸಿ, ರೊನಾಲ್ಡ್ ಕೊಲಾಸೊ ಅವರು ಪಿಂಗಾರ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಭಾಷಣಗೈದ ಅನಿಲ್ ಲೋಬೊ ಅವರು ಮಾತನಾಡಿ ‘ಅತ್ಯುತ್ತಮ ಸಂವಿಧಾನವುಳ್ಳ, ಜಾತ್ಯಾತೀತ ಸ್ವತಂತ್ರ ಭಾರತದಲ್ಲಿ ಜೀವಿಸುವ ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು, ಹೆಚ್ಚಿನ ನಾಯಕತ್ವವನ್ನು ತೋರ್ಪಡಿಸಿ ಸಾಮಾಜಿಕ ಪರಿವರ್ತನೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಪಣತೊಡಬೇಕಿದೆ. ನಮ್ಮ ಸಾಂವಿಧಾನಿಕ ಹಕ್ಕುಗಳಿಗೆ ಕುತ್ತು ಬಂದಾಗ ಅವುಗಳ ವಿರುದ್ಧ ಹೋರಾಡುವ ಮನೋಭಾವವನ್ನು ಕಥೋಲಿಕ್ ಸಮುದಾಯ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಸ್ವಉದ್ಯಮದಲ್ಲಿ, ರಾಜಕೀಯದಲ್ಲಿ, ಸಹಕಾರಿ ರಂಗದಲ್ಲಿ, ಸರಕಾರಿ ಸೇವೆಗಳಲ್ಲಿ ಇನ್ನಷ್ಟು ಮುಂದುವರಿಯುವುದರ ಜೊತೆಗೆ ಜನರ ಅಗತ್ಯತೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದು ಇಂದಿನ ಅಗತ್ಯ’ ಎಂದರು.
ಕಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ| ಗುರು ಮ್ಯಾಥ್ಯೂ ವಾಸ್, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ವಂ| ಗುರು ಪಾವ್ಲ್ ಸಿಕ್ವೇರಾ, ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಜೆ.ಆರ್. ಲೋಬೊ, ಕೆ. ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಸಭಾ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ವಲಯಾಧ್ಯಕ್ಷ ಹೆರಾಲ್ಡ್ ರೇಗೊ ಪ್ರಾಸ್ತಾವಿಕವಾಗಿ ಮಾತನಾಡಿ ‘ಅವಿಭಜಿತ ಜಿಲ್ಲೆಗಳಲ್ಲಿ ಶಿಸ್ತು, ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಶೈಕ್ಷಣಿಕ, ವೈದ್ಯಕೀಯ ರಂಗಗಳಲ್ಲಿ ಅದ್ವಿತೀಯ ಸೇವೆಯನ್ನು ನೀಡಿರುವ ಕಥೋಲಿಕ ಸಮುದಾಯ ಸ್ವಾಭಿಮಾನ, ಒಗ್ಗಟ್ಟು, ಅಸ್ಮಿತೆ ತೋರ್ಪಡಿಸುವ ಸಂಭ್ರಮವಾಗಿ ಕಥೊಲಿಕ್ ಸಮಾಜೋತ್ಸವವನ್ನು ಆಚರಿಸುತ್ತಿದೆ’ ಎಂದರು.
ಸಮಾರಂಭದಲ್ಲಿ ಬಿಹಾರದ ಬೆಥೀಯ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕವಾದ ಅತೀ ವಂದನೀಯ ಸೆಬೆಸ್ಟಿಯನ್ ಪೀಟರ್ ಗೋವಿಯಸ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ಮಂಗಳೂರು ಕ್ರೈಮ್ ಬ್ರಾಂಚ್ ಎಸಿಪಿ ವೆಲೆಂಟೈನ್ ಡಿಸೋಜಾ, ಐಎಎಸ್ ಅಧಿಕಾರಿ ಕು| ಮಿಶಾಲ್ ಕ್ವೀನಿ ಡಿಕೋಸ್ತಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ಕೇಂದ್ರ, ಪ್ರಾಂತ್ಯ ಹಾಗೂ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಅಭಯಚಂದ್ರ ಜೈನ್ ‘ನಾನು ಯಾವ ಕಾರಣಕ್ಕೂ ಕ್ರೈಸ್ತ ಸಮಾಜಕ್ಕೆ ದ್ರೋಹ ಬಗೆದವನಲ್ಲ. ಮಂಗಳೂರಿನಲ್ಲಿ ಕೈಸ್ತ ಅಭ್ಯರ್ಥಿಗೆ ಅವಕಾಶ ಕೊಡದಿದ್ದರೆ ಸ್ಪರ್ಧಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರೊನಾಲ್ಡ್ ಕೊಲಾಸೊ ಅವರು ‘ನಾವು ಅಲ್ಪಸಂಖ್ಯಾತರಾಗಿದ್ದರೂ ಸೇವಾಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ಅತೀ ಹೆಚ್ಚಿನ ಕೆಲಸ ಮಾಡಿದೆ. ಅದಕ್ಕೆ ತಕ್ಕಂತೆ ನಮ್ಮ ಸಮಾಜಕ್ಕೆ ಸರಕಾರದಿಂದ, ರಾಜಕೀಯ ಪಕ್ಷಗಳಿಂದ ಸೂಕ್ತ ಮನ್ನಣೆ ಸಿಕ್ಕಿಲ್ಲ ಮತ್ತು ಅದನ್ನು ಪಡೆಯುವುದಕ್ಕೆ ಸಂಘಟಿತ ಹೋರಾಟವನ್ನು ಮಾಡಬೇಕಿದೆ’ ಎಂದರು.
ಶಾಸಕ ಜೆ.ಆರ್. ಲೋಬೊ ಅವರು ಮಾತನಾಡಿ ‘ನಾವು ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಚರ್ಚ್ ಳನ್ನು ಕಟ್ಟುವುದನ್ನು ನಿಲ್ಲಿಸಿ, ನಮ್ಮ ಸಮಾಜವನ್ನು ಕಟ್ಟುವ, ಸಮುದಾಯದ ಜನರನ್ನು ಆಥರ್ಿಕವಾಗಿ, ಸಾಮಾಜಿಕವಾಗಿ ಸಶಕ್ತೀಕರಿಸುವ ಕೆಲಸ ಮಾಡಬೇಕಿದೆ’ ಎಂದರು.
ಬೆಳ್ಳಿಹಬ್ಬ ಸಂಚಾಲಕ ಜೆರಾಲ್ಡ್ ಡಿಕೋಸ್ತಾ ಅವರು ‘ನಮ್ಮ ಯುವಕರಿಗೆ ಉನ್ನತ ಶಿಕ್ಷಣಕ್ಕೆ ಹಾಗೂ ಸ್ವಉದ್ಯಮಕ್ಕೆ ಪ್ರೋತ್ಸಾಹ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸರಕಾರಿ ಹುದ್ದೆಗಳನ್ನು ಪಡೆಯಲು ಮಾರ್ಗದರ್ಶನ ನೀಡುವುದು, ಸಮಯ ಪರಿಪಾಲನೆಗೆ ಒತ್ತು ನೀಡುವುದು, ಅನಗತ್ಯ ದುಂದು ವೆಚ್ಚ ಕಡಿಮೆ ಮಾಡುವುದು, ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲು ಹೋರಾಟ ನಡೆಸುವುದು ಮತ್ತು ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮ ಆಗ್ರಹಿಸಿ’ ಸಾಮಾಜಿಕ ಹಾಗೂ ರಾಜಕೀಯ ಹಕ್ಕೊತ್ತಾಯ ಮಂಡಿಸಿದರು.
ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಕೋಸ್ತಾ, ಕಥೋಲಿಕ್ ಸಭಾ ವಲಯ, ಪ್ರಾಂತ್ಯ, ಕೇಂದ್ರೀಯ ಸಮಿತಿಯ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಧ್ಯೇಯ ಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಲಯ ಕಾರ್ಯದರ್ಶಿ ಲೋಯ್ಡ್ ರೇಗೊ ವರದಿ ವಾಚಿಸಿದರು. ಸೈಮನ್ ಮಸ್ಕರೇನಸ್, ವಲೇರಿಯನ್ ಸಿಕ್ವೇರಾ, ಲೀನಾ ಪಿಂಟೊ, ವಿಕ್ಟರ್ ಕಡಂದಲೆ ಸನ್ಮಾನ ಪತ್ರ ವಾಚಿಸಿದರು.. ಆ್ಯಂಡ್ರೂ ಡಿಸೋಜಾ ಮತ್ತು ಕ್ಲೊಟಿಲ್ಡಾ ಮಿರಾಂದಾ ಕಾರ್ಯಕ್ರಮ ನಿರೂಪಿಸಿದರು.