Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ

#sudhiir#hegde#karkala#mangalore

ಡಾ| ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಶಿಬಿರ

ಮೂಡಬಿದಿರೆ: ಮಂಗಳೂರಿನ ಖ್ಯಾತಕಣ್ಣಿನ ವೈದ್ಯರಾದಡಾ| ಸುಧೀರ್ ಹೆಗ್ಡೆ ನೇತೃತ್ವದಲ್ಲಿಜನವರಿ 21ರಂದು ವಾಲ್ಪಾಡಿ-ಅಳಿಯೂರಿನ ವಿಕಾಸನಗರದಲ್ಲಿರುವ ‘ಶ್ರೀ ಶನೀಶ್ವರದೇವಸ್ಥಾನ’ದ ವಠಾರದಲ್ಲಿ ಕಣ್ಣಿನ ತಪಾಸಣೆಯ ಶಿಬಿರ ನಡೆಯಲಿದೆ.

ಡಾ.ಸುಧೀರ್ ಹೆಗ್ಡೆಯವರ10 ಜನರ ತಂಡ ಕಣ್ಣಿನ ತಪಾಸಣೆ ನಡೆಸಿಕೊಡಲಿದೆ. ತಪಾಸಣೆ, ಚಿಕಿತ್ಸೆ, ಅವಶ್ಯಕ ಔಷಧಿ, ಕನ್ನಡಕ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆ ಸಂಪೂರ್ಣಉಚಿವಾಗಿದ್ದು, ಸಾರ್ವಜನಿಕರುಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ಮೂಡುಬಿದಿರೆಯಲ್ಲಿ 2000ದಿಂದ 2014ರವರೆಗೆ, 14 ವರ್ಷಗಳ ಕಾಲ ವಿಜಯನಗರದಲ್ಲಿರುವ ಶಂಕರ ಐಕ್ಲಿನಿಕ್ ಮೂಲಕ ಮೂಡುಬಿದಿರೆಯ ಆಸುಪಾಸಿನ ಸಾವಿರಾರುಜನರಿಗೆಕಣ್ಣಿನಚಿಕಿತ್ಸೆಯನ್ನುಉಚಿತವಾಗಿ ನೀಡಿರುವ ಹಿರಿಮೆ, ಸೇವಾಮನೋಭಾವಡಾ. ಸುಧೀರ್ ಹೆಗ್ಡೆಯವರದ್ದಾಗಿದೆ.

ಮಾನವರ ಬದುಕಿನಲ್ಲಿಕಣ್ಣಿಗೆ ಬಹುಮುಖ್ಯವಾದ ಸ್ಥಾನವಿದ್ದು, ಪ್ರತಿಕ್ಷಣ ಕಾರ್ಯಪ್ರವೃತ್ತವಾಗಿರುವ ಕಣ್ಣಿನಕುರಿತು ನಾವು ಅವಶ್ಯಕ ಕಾಳಜಿ ವಹಿಸದೆ ಇರುವುದರಿಂದಾಗಿಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಿಯಮಿತ ಅವಧಿಯಲ್ಲಿಕಣ್ಣಿನ ಪರಿಶೀಲನೆ, ಅವಶ್ಯಕ ಮುಂಜಾಗರೂಕತೆ ಕ್ರಮಗಳನ್ನು ಪಾಲಿಸುವುದರಿಂದಕಣ್ಣಿನ ಸಂರಕ್ಷಣೆ ಸಾಧ್ಯ. ಅದಾಗ್ಯೂ ನೂತನ ತಂತ್ರಜ್ಞಾನಗಳ ಬಳಕೆ, ಶಸ್ತ್ರಚಿಕಿತ್ಸೆ ಶುಲ್ಕಗಳು ಬಡವರಿಗೆದುಭಾರಿಯಾಗಿದೆ. ಮಾತ್ರವಲ್ಲ, ಅಂತಹ ಚಿಕಿತ್ಸೆಗಳು ನಗರಗಳಲ್ಲಿ ಮಾತ್ರ ಲಭ್ಯ.

ಇಂತಹ ಸಮಸ್ಯೆಗಳಿಂದ ಬಳಲಿ ಬರುತ್ತಿದ್ದ, ಸಾವಿರಾರುಜನರಿಗೆತನ್ನಿಂದಾದ ಸಹಾಯವನ್ನು ಮಾಡುತ್ತಿದ್ದ ಡಾ| ಸುಧೀರ್ ಹೆಗ್ಡೆ, ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿ, ಜನರ ಬಳಿಗೆ ಕಣ್ಣಿಸ ಸೇವೆಯನ್ನು ಕೊಂಡೊಯ್ಯುವ ‘ಕಣ್ಣಿನತಪಾಸಣಾ ಶಿಬಿರ’ಗಳ ಸರಣಿಯನ್ನುಆರಂಭಿಸುತ್ತಿದ್ದಾರೆ. ದಕ್ಷಿಣಕನ್ನಡಜಿಲ್ಲೆಯ ಹಳ್ಳಿಗಳನ್ನು ಕೇಂದ್ರೀಕರಿಸಿ ಈ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ದಕ್ಷಿಣಕನ್ನಡಕಣ್ಣಿನ ವೈದ್ಯರ ಸಂಘದ ಅಧ್ಯಕ್ಷರಾಗಿರುವಡಾ| ಸುಧೀರ್ ಹೆಗ್ಡೆ, ಮೂಲತಃ ಕಾರ್ಕಳದವರಾಗಿದ್ದು, ತಮ್ಮ ವೃತ್ತಿಜೀವನವನ್ನು ಮೂಡುಬಿದಿರೆಯಲ್ಲಿ ಆರಂಭಿಸಿದ್ದಾರೆ. ಪ್ರಸ್ತುತ ಮಂಗಳೂರಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಎ. ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಕಣ್ಣಿನ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿದ್ದಾರೆ.