Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ

#kantavara

ಮೂಡಬಿದಿರೆ: ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನೂ ಒತ್ತಡವು ಬಾಧಿಸುತ್ತಿದ್ದು ಸರ್ವವ್ಯಾಪಿಯಾಗಿರುವ ಈ ಒತ್ತಡದ ನಿರ್ವಹಣೆ ಬಗ್ಗೆಯೇ ಇಂದು ಆದ್ಯತೆ ನೀಡಬೇಕಾಗಿದೆ. ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದು, ನಮ್ಮ ಇತಿಮಿತಿಯನ್ನು ದಾಟಿ ಸ್ಪರ್ಧೆಗಿಳಿಯುವುದು ಮತ್ತು ಮಿತಿಮೀರಿದ ಆಕಾಂಕ್ಷೆ ನಿರೀಕ್ಷೆಗಳೇ ನಮ್ಮ ಎಲ್ಲಾ ಮಾನಸಿಕ ಒತ್ತಡಗಳಿಗೆ ಮೂಲ ಕಾರಣಗಳಾಗಿವೆ ಎಂಬುದಾಗಿ ಉಡುಪಿ ಡಾ.ಎ.ವಿ.ಬಾಳಿಗಾ ವೈದ್ಯಕೀಯ ಸಮೂಹ ಸಂಸ್ಥೆಗಳ ನಿದರ್ೇಶಕರು ಹಾಗೂ ಪ್ರಸಿದ್ಧ ಮನೋವೈದ್ಯರೂ ಆಗಿರುವ ಡಾ.ಪಿ.ವಿ.ಭಂಡಾರಿಯವರು ತಿಳಿಸಿದರು. ಅವರು ಅಲ್ಲಮ ಪ್ರಭುಪೀಠದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ “ಒತ್ತಡ ಮತ್ತು ಸಮಾಜ” ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಹೆತ್ತವರು ಮತ್ತು ಶಿಕ್ಷಕರು ಈಗ ಬಾಲ್ಯದಲ್ಲಿಯೇ ಮಕ್ಕಳ ಮೇಲೆ ಇಲ್ಲದ ಒತ್ತಡವನ್ನು ಹಾಕುತ್ತಿದ್ದಾರೆ. ಶಾಲೆಗಳೆಲ್ಲ ಅಂಕಗಳನ್ನು ತಯಾರಿಸುವ ಯಂತ್ರಗಳಾಗಿವೆ ವಿನಹ ಮಕ್ಕಳ ಭಾವನೆಗಳಿಗೆ ಅಲ್ಲಿ ಬೆಲೆಯೇ ಇರುವುದಿಲ್ಲ. ಶಿಕ್ಷಕರು ಹುಡುಕುವುದು ಮಕ್ಕಳ ತಪ್ಪುಗಳನ್ನು ಮಾತ್ರವಲ್ಲದೇ ಪ್ರತೀ ಮಗುವಿನಲ್ಲಿರುವ ವಿಶೇಷ ಶಕ್ತಿಯನ್ನು ಯಾರೂ ಗಮನಿಸುವುದಿಲ್ಲ, ಗಮನಿಸಿದರೂ ಹೆತ್ತವರು, ಶಿಕ್ಷಕರು ಅದನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಹೆತ್ತವರು ಮತ್ತು ಶಿಕ್ಷಕರ ಆಕಾಂಕ್ಷೆಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇನ್ನು ಹದಿಹರೆಯ ಒಂದು ವಿಚಿತ್ರವಾದ ವಯಸ್ಸು. ಕ್ರಾಂತಿಕಾರಿ ಮನೋಭಾವ, ಕುತೂಹಲ, ಪ್ರಯೋಗಶೀಲತೆ, ಆಕರ್ಷಣೆಗಳೆಲ್ಲ ಸಹಜ. ಆದರೆ ಇವೆಲ್ಲ ಹೆಚ್ಚಾದರೂ ಕೂಡಾ ಅದು ಖಿನ್ನತೆಗೆ ದಾರಿಯಾಗುತ್ತದೆ. ಇಂದು ಹದಿಮೂರರಿಂದ ಹತ್ತೊಂಭತ್ತು ವರ್ಷದೊಳಗಿನ ಯುವಜನರು ಒತ್ತಡ ಖಿನ್ನತೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಈ ಸಂಖ್ಯೆ ಏರುತ್ತಲೇ ಹೋಗುತ್ತಿರುವುದು ಖಿನ್ನತೆಯ ದುಷ್ಪರಿಣಾಮವನ್ನು ಸೂಚಿಸುತ್ತಿದೆ. ಮಧ್ಯ ವಯಸ್ಸಿನಲ್ಲಿ ಕೌಟುಂಬಿಕವಾಗಿಯೂ ಈಗ ಸಣ್ಣಪುಟ್ಟ ಕಾರಣಗಳಿಗಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಇದರ ಜೊತೆಗೆ ವೃದ್ಧರು, ಸಲಿಂಗಿಗಳು, ತೃತೀಯ ಲಿಂಗಿಗಳು ಕೂಡಾ ವಿಭಿನ್ನ ರೀತಿಯ ಒತ್ತಡಗಳಿಂದ ಬಳಲುತ್ತಿರುತ್ತಾರೆ.
ಮೂಢನಂಬಿಕೆ ಮತ್ತು ಒತ್ತಡಕ್ಕೆ ಬಹಳ ನಿಕಟ ಸಂಬಂಧವಿದ್ದು ಎಲ್ಲಾ ಧರ್ಮಗಳಲ್ಲಿರುವ ಮೂಢನಂಬಿಕೆಗಳನ್ನು ತ್ಯಜಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕುಟುಂಬ ವೈದ್ಯರೊಂದಿಗೆ ಎಲ್ಲ ಸಮಸ್ಯೆಗಳನ್ನು ಮುಚ್ಚಿಡದೆ ಹೇಳಿಕೊಳ್ಳುವುದು, ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮಕ್ಕಾಗಿ ವ್ಯಯಿಸುವುದು, ಕಾಯಿಲೆಗಳನ್ನು ಜೋಪಾನವಾಗಿ ಆರೈಕೆ ಮಾಡಿಕೊಳ್ಳುತ್ತಾ ದಿನದಲ್ಲಿ ಹತ್ತು ನಿಮಿಷವಾದರೂ ಧ್ಯಾನ ಅಥವಾ ಸುಮ್ಮನಿದ್ದು ಬಿಟ್ಟರೆ ಒತ್ತಡಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದರು. ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.  ಕಲ್ಲೂರು ನಾಗೇಶ್ರವರು ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಯಶೋಧರ್.ಪಿ.ಕರ್ಕೇರಾರವರು ವಂದಿಸಿದರು.