Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಐತಿಹ್ಯದ ನಗರದಲ್ಲಿ `ಹೆರಿಟೇಜ್’ಗೆ ಇಲ್ಲ ರಕ್ಷಣೆ!

#heritage#city#moodbidri#vaarte#special#exclusive#story

ವಾರ್ತೆ ವಿಶೇಷ: ಹರೀಶ್ ಕೆ.ಆದೂರು
“ಮೂಡಬಿದಿರೆ ಹತ್ತು ಹಲವು ಬಸದಿ,ದೇಗುಲ,ವಾಸ್ತುವೈಭವದ ಕೆರೆ, ಜೈನಕಾಶಿ,ಪುರಾತನ ನಿರ್ಮಿತಿಗಳನ್ನು ಹೊಂದಿರುವ `ಹೆರಿಟೇಜ್’ಪಟ್ಟಕ್ಕೆ ಅರ್ಹತೆ ಹೊಂದಿರುವ ನಗರ. ಇಂತಹ ಪಟ್ಟಣದಲ್ಲಿ ಪ್ರಾಚೀನ ಸಂಸ್ಕೃತಿಯ ಪರಿಚಯಿಸುವ ಇಂತಹ ವಿಚಾರಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸ. ಕೋಟೆ ಸೂರೆಹೋದಮೇಲೆ ದಿಡ್ಡಿಬಾಗಿಲು ಹಾಕಿದರಂತೆ ಎಂಬ ಗಾದೆಯಂತಾಗದಿರಲಿ. ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಿ ಕಾರ್ಯೋನ್ಮುಖರಾಗುವುದು ಒಳಿತು.”
ಶ್ರಮಸಂಸ್ಕೃತಿಯ ಸೂಚಕದಂತಿದ್ದ `ತಲೆಹೊರೆ ಇಳಿಸುವ ಕಲ್ಲು’ ಇಂದು ಹಲವೆಡೆಗಳಲ್ಲಿ ಇತಿಹಾಸದ ಕಾಲಗರ್ಭಕ್ಕೆ ಉರುಳಿಹೋಗಲಾರಂಭಿಸಿದೆ. ಕಾಸರಗೋಡು ಜಿಲ್ಲೆಯ ಕೆಲವೆಡೆಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅಳಿದುಳಿದ ಹೊರೆಕಲ್ಲುಗಳು ಇಂದಿಗೂ ಕಾಣಸಿಗುತ್ತವೆ. ಮೂಡಬಿದಿರೆ ನಗರ ವ್ಯಾಪ್ತಿಯ ಎರಡು ಕಡೆಗಳಲ್ಲಿ ಈ ಕಲ್ಲು ಕಂಡುಬಂದಿತ್ತು. ಮೂಡಬಿದಿರೆಯ ಜಿ.ವಿ.ಪೈ ನಗರದಿಂದ ಗೌರೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಇಂತಹ ಕಲ್ಲು ಇದ್ದರೆ , ಮೂಡಬಿದಿರೆಯಿಂದ ವಿದ್ಯಾಗಿರಿಗೆ ಸಾಗುವ ಹೆದ್ದಾರಿಯಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿಯವರ ಮನೆಯೆದುರು ರಸ್ತೆಯಂಚಿನಲ್ಲಿ ಮತ್ತೊಂದು ಕಲ್ಲು ಉಳಿದುಕೊಂಡಿದೆ.
ಇವೆಲ್ಲವೂ ಪುರಾತನ ಕಾಲದಲ್ಲಿ ತಲೆ ಹೊರೆಯ ಮೂಲಕ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕೊಂಚ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಹೊರೆ ಇಳಿಸಲು ಬಳಸುವ ಕಲ್ಲಾಗಿದ್ದವು.! ಆಧುನಿಕತೆಯ ಪ್ರಭಾವದಿಂದ ಈ ಪುರಾತನ ಕಲ್ಲುಗಳು ಕಾಲಗರ್ಭಕ್ಕೆ ಸೇರಹೊರಟಿವೆ. ಪುರಾತನ ವ್ಯವಸ್ಥೆಗಳು ಹೇಗಿದ್ದವು ಎಂಬುದನ್ನು ಸೂಚಿಸುವ ಅಳಿದುಳಿದ ಅವಶೇಷಗಳಂತಿದ್ದ ಇವುಗಳನ್ನು ಉಳಿಸಿದ್ದೇ ಆದಲ್ಲಿ ಮುಂದಿನ ಪೀಳಿಗೆಗೆ ನಮ್ಮ ಹಿರಿಯರ ಶ್ರಮಜೀವನದ ಅರಿವಾಗುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. ಆದರೆ ಇದೀಗ ಕಾಲ ಮಿಂಚಿಹೋಗಿದೆ…ಕಲ್ಲು ಧರಾಶಾಹಿಯಾಗಿದೆ….

ಚರಂಡಿಗಾಗಿ ಕಲ್ಲು ತೆಗೆದರು!
ಮೂಡಬಿದಿರೆಯ ಗೌರೀ ದೇವಸ್ಥಾನದ ರಸ್ತೆಯಂಚಿನಲ್ಲಿದ್ದ ಈ ಹೊರೆಯಿಳಿಸುವ ಕಲ್ಲನ್ನು ಇತ್ತೀಚೆಗಷ್ಟೇ ರಸ್ತೆ ಬದಿಯ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ತೆಗೆಯಲಾಯಿತು. ಅತ್ಯಂತ ಪುರಾತನ ಈ ಕಲ್ಲು ಯಾವುದೇ ರೀತಿಯ ವಾಸ್ತು ವೈಭವ ಹೊಂದಿಲ್ಲದಿದ್ದರೂ `ಶ್ರಮಜೀವನಕ್ಕೊಂದು’ ಸಾಕ್ಷಿಯಂತೆ ಉಳಿದಿತ್ತು. ನಗರೀಕರಣದ ಪ್ರಭಾವ ,ಆಧುನಿಕತೆಯ ವ್ಯಾಮೋಹಗಳು , ಅಭಿವೃದ್ಧಿಯ ಹೆಸರಿನಲ್ಲಿ ನಾಮಾವಶೇಷವಾಗುವಂತಾಯಿತು. ಈ ಕಲ್ಲನ್ನು ರಸ್ತೆಯಂಚಿನಲ್ಲಿ ತುಂಡರಿಸಿ ಹಾಕಿದ್ದು ನೋಡುವಾಗ ಭವಿಷ್ಯಕ್ಕೆ ನಮ್ಮ ಕೊಡುಗೆ ಇದೇನೇ ಎಂದು ಪ್ರಶ್ನಿಸುವಂತೆ ಭಾಸವಾಗುತ್ತಿದೆ.

ಅಂದಿಗೆ ಅನಿವಾರ್ಯ!
ಹಿಂದಿನ ಕಾಲದಲ್ಲಿ ವಾಹನ ವ್ಯವಸ್ಥೆಗಳಿದ್ದಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದ ಅಂದಿನ ಪರಿಸ್ಥಿತಿಯಲ್ಲಿ ವಸ್ತು ಪರಿಕರಗಳನ್ನು ತಲೆಯಲ್ಲಿ ಹೊತ್ತುಕೊಂಡು ನಡೆದುಕೊಂಡು ಹೋಗುವ ಅನಿವಾರ್ಯತೆಯಿತ್ತು. ನಡೆದುಹೋಗುವ ಹಾದಿ ಮಧ್ಯೆ ಅಲ್ಲಲ್ಲಿ ಅಲ್ಲಲ್ಲಿ ಇಂತಹ ಕಲ್ಲುಗಳಿದ್ದವು. ಸುಮಾರು ನಾಲ್ಕೈದು ಅಡಿ ಎತ್ತರದ ಈ ಕಲ್ಲುಗಳ ಮೇಲೆ ತಲೆಹೊರೆಗಳನ್ನು ಜಾರಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಪ್ರತೀ ಊರಿನಲ್ಲೂ ಹಲವೆಡೆಗಳಲ್ಲಿ ಇಂತಹಕಲ್ಲುಗಳು ಕಂಡುಬರುತ್ತಿದ್ದವು.
ನಗರೀಕರಣದ ಪರಿಣಾಮ , ಆಧುನಿಕತೆಯ ಆಗಮನದಿಂದಾಗಿ ಇವೆಲ್ಲವೂ ಇಂದು ನಶಿಸಿಹೋಗಿವೆ.