Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಎದೆಭಾಗಕ್ಕೆ 2;ಹಣೆಗೆ1ಗುಂಡು

ಗೌರೀ ಲಂಕೇಶ್ ಮೃತದೇಹ

ಪತ್ರಕರ್ತೆ ಗೌರೀ ಲಂಕೇಶ್ ಗುಂಡಿಗೆ ಬಲಿ

ವಿಚಾರವಾದಿ ಪತ್ರಕರ್ತೆ ಗೌರೀ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗದಲ್ಲೇ ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಅವರ ಹಣೆ ಭಾಗಕ್ಕೆ ಒಂದು , ಎದೆ ಭಾಗಕ್ಕೆ 2ಗುಂಡುಗಳು ತಗುಲಿವೆ. ಮನೆಯ ಗೋಡೆಗೆ ನಾಲ್ಕು ಗುಂಡುಗಳು ತಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಹತ್ತಿರದಿಂದಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಬಗ್ಗೆ ಸಂದೇಹವಿದೆ. ಬೆಂಗಳೂರಿನ ರಾಜರಾಜೇಶ್ವರೀ ನಗರದಲ್ಲಿರುವ ಅವರ ಮನೆಯ ಮುಂದೆಯೇ ಹತ್ಯೆಮಾಡಲಾಗಿದೆ. ಅವರ ಮನೆಯ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಗತಿಪರ ಚಿಂತನೆಯಲ್ಲಿ ಮುಂಚೂಣಿಯಲ್ಲಿದ್ದ ಗೌರೀ ಲಂಕೇಶ್ ನೇರ ನಿಷ್ಟುರ ಪತ್ರಕರ್ತೆ ಎನಿಸಿಕೊಂಡಿದ್ದರು.

ಕಾರಣ ಗೊತ್ತಿಲ್ಲ…

ಗೌರೀ ಲಂಕೇಶ್ ಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದೆ. ಕರ್ನಾಟಕದಲ್ಲಿ ಪ್ರಗತಿಪರ ಚಿಂತಕರ ಹತ್ಯೆ ಸಾಲು ಸಾಲಾಗಿ ನಡೆಯುತ್ತಿದೆ ಎಂಬ ಮಾತು ಇದೀಗ ಬಲವಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ ಎಂಬ ಕೂಗೂ ಕೇಳಿಬರಲಾರಂಬಿಸಿದೆ.