Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ

#rotary#school#moodbidri

ನಮ್ಮ ಪ್ರತಿನಿಧಿ ವರದಿ
ಹದಿನೈದು ವರುಷಗಳನ್ನು ಪೂರೈಸಿದ ಹಿರಿಯ ಸಾಧಕ ಶಿಕ್ಷಕರನ್ನು ರೋಟರಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀವಿಜಯಲಕ್ಷ್ಮೀ ಪೌಂಡೇಷನ್ ಆಶ್ರಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೂಡಬಿದಿರೆಯ ರೋಟರಿ ಎಜುಕೇಷನ್ ಸೊಸೈಟಿ, ರೋಟರಿ ಕ್ಲಬ್ ಮೂಡಬಿದಿರೆ ಹಾಗೂ ಶ್ರೀವಿಜಯಲಕ್ಷ್ಮೀ ಫೌಂಡೇಷನ್ ಮೂಡಬಿದಿರೆಯ ಸಂಯುಕ್ತಾಶ್ರಯದಲ್ಲಿ `ರೋಟರಿ ಸಮ್ಮಿಲನ’ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 18ಸಾವಿರ ನಗದು, ಪ್ರಶಸ್ತಿ ಫಲಕದೊಂದಿಗೆ ಸಾಂಪ್ರದಾಯಿಕ ಸನ್ಮಾನ ನೀಡಿ ಗೌರವಿಸಲಾಯಿತು.

ರೋಟರಿ ಎಜುಕೇಷನ್ ಸೊಸೈಟಿ ಪ್ರವರ್ತಿತ ರೋಟರಿ ಶಾಲೆಯಲ್ಲಿ ಹದಿನೈದು ವರುಷಗಳಿಂದಲೂ ಅಧಿಕಕಾಲ ಸೇವೆ ಸಲ್ಲಿಸಿದ ಭಾರತೀ ನಾಯಕ್, ಲ್ಯಾನ್ಸಿ ರೋಡ್ರಿಗಸ್, ಪ್ರಕಾಶ್ ಹೆಗ್ಡೆ, ಗಜಾನನ ಮರಾಠೆ, ದೇವಕಿ ಭಟ್, ಜೂಲಿಯಾನ ನಝ್ರತ್, ಸಂಧ್ಯಾ ಆರ್ ಶೆಟ್ಟಿ, ಸುಧೀರ್ ಕುಮಾರ್ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಸತೀಶ್ ಹಾಗೂ ದೇವಪ್ಪ ಬಂಗೇರ ಅವರನ್ನು ಗೌರವಿಸಲಾಯಿತು. ಜೋಸೆಫ್ ಮ್ಯಾಥ್ಯೂ ಅತಿಥಿಗಳಾಗಿದ್ದರು. ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀವಿಜಯಲಕ್ಷ್ಮೀ ಫೌಂಡೇಷನ್ ಅಧ್ಯಕ್ಷ ಎ.ಕೆ.ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನ್ಮಾನಿತರ ಪರವಾಗಿ ಗಜಾನನ ಮರಾಠೆ, ಸುಧೀರ್ ಕುಮಾರ್, ಭಾರತೀ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರವೀಣ್ ಚಂದ್ರ ಅತಿಥಿಗಳ ಪರಿಚಯಮಾಡಿದರು. ಶಾಲಾ ಆಡಳಿತಮಂಡಳಿ ಕಾರ್ಯದರ್ಶಿ ನಾರಾಯಣ ಪಿ.ಎಂ. ಸಾಧಕ ಶಿಕ್ಷಕರ ಪರಿಚಯಮಾಡಿದರು. ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಎ.ಎಂ.ಕುಮಾರ್, ಡಾ.ಯತಿಕುಮಾರ್ ಸ್ವಾಮಿ ಗೌಡ ವೇದಿಕೆಯಲ್ಲಿದ್ದರು.ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಾಮತ್ ಸ್ವಾಗತಿಸಿದರು.