Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಉದ್ಯೋಗ`ಸಿರಿ’ಯ ಮೂಲಕ ಕನ್ನಡದ ಕೈಗೆ ಕೆಲಸ…!

#alvas #udyogsiri#moodbidri#vaarte

ಹರೀಶ್ ಕೆ.ಆದೂರು
ಏನೇ ಹೇಳಿ…ಭಾಷಣದಲ್ಲಿ `ಭಾಗ್ಯ’ಗಳ ಸುರಿಮಳೆಯನ್ನೇ ನೀಡುವ ರಾಜಕಾರಣಿಗಳು ನೈಜ ಫಲಾನುಭವಿಗಳಿಗೆ ಯೋಜನೆಯ ಸಂಪೂರ್ಣ ಲಾಭ ನೀಡುವಲ್ಲಿ ಶ್ರಮಿಸುತ್ತಾರೆಯೇ…? ಅಥವಾ ಯೋಜನೆಯ ಲಾಭ ದೊರಕುತ್ತಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ ಇಲ್ಲ.
ಈ ವಿಚಾರ ಇಲ್ಯಾಕೆ ಎಂಬ ಮೂಲಭೂತ ಪ್ರಶ್ನೆ ಉದ್ಭವಿಸದೆ ಇರದು ಅಲ್ಲವೇ…? ಕನ್ನಡ ರಾಜ್ಯೋತ್ಸವವಿರಲಿ, ಕನ್ನಡ ಸಾಹಿತ್ಯ ಸಮ್ಮೇಳನವಿರಲಿ ಇಲ್ಲೆಲ್ಲಾ ವೇದಿಕೆಯೇರಿ ಭಾಷಣ ಬಿಗಿಯುವ ರಾಜಕಾರಣಿಗಳು, ಸೋ ಕಾಲ್ಡ್ ಕನ್ನಡಾಭಿಮಾನಿಗಳು `ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ, ಉದ್ಯೋಗದಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತದೆ’ ಎಂದು ಬೊಬ್ಬರಿಯುತ್ತಾರೆ. ಇವರ್ಯಾರೂ ಇದನ್ನು ಅನುಷ್ಠಾನಗೊಳಿಸುವಲ್ಲಿ ಚಿಂತಿಸುತ್ತಿಲ್ಲ. ಕೇವಲ ಅವೆಲ್ಲವೂ ಭಾಷಣಗಳಿಗಷ್ಟೇ ಸೀಮಿತ ಎಂಬಂತಾಗುತ್ತದೆ.
ಏಕವ್ಯಕ್ತಿಯಾಗಿದ್ದುಕೊಂಡೇ ತನ್ನ ಶಿಕ್ಷಣ ಸಂಸ್ಥೆಯ ಮೂಲಕ ಕನ್ನಡ ಕಟ್ಟುವ ನಿಜಾರ್ಥದಲ್ಲಿ ಕನ್ನಡದ ಸೇವೆಗೈಯುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನುಡಿದಂತೆ ನಡೆಯುತ್ತಿದ್ದಾರೆ. ಭಾಷಣದಲ್ಲಿ ಹೇಳಿದ್ದನ್ನು ಮಾಡಿ ತೋರಿಸುತ್ತಿದ್ದಾರೆ. ತನ್ಮೂಲಕ ನಿಜಾರ್ಥದಲ್ಲಿ `ಕನ್ನಡ ಪ್ರೇಮಿ’ಯಾಗಿದ್ದಾರೆ.

ಇದೀಗ ಉದ್ಯೋಗ ಸಿರಿ…
ಹದಿನಾಲ್ಕು ವರ್ಷಗಳಿಂದ ನಿರಂತರ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಅತ್ಯದ್ಭುತವಾಗಿ ನಭೂತೋ ಎಂಬಂತೆ ಪ್ರತೀ ಸಾರಿಯೂ ಯಶಸ್ವಿಯಾಗಿ ನಡೆಸುತ್ತಿದ್ದಾರೆಯಲ್ಲದೆ ವರ್ಷಂಪ್ರತಿ ಒಂದನ್ನೊಂದು ಮೀರಿಸುವ ರೀತಿಯಲ್ಲಿ ಸಾಕಾರಗೊಳಿಸುತ್ತಿದ್ದಾರೆ. ಎಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆಯೋ ಅಲ್ಲಿ ಕನ್ನಡಿಗರ ಕೈ ಹಿಡಿದು ಎತ್ತುವ ತನ್ಮೂಲಕ ಕನ್ನಡಕ್ಕೆ ನ್ಯಾಯ ನೀಡುವ ಕಾರ್ಯವನ್ನು ಸಾಧಿಸಿ ಸಫಲತೆ ಸಾಧಿಸಿದ್ದಾರೆ.
ಸರಕಾರೀ ಮಟ್ಟದಲ್ಲಿರಲಿ, ಖಾಸಗೀ ಸಂಸ್ಥೆಗಳಲ್ಲಿರಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿರುವ ವಿಚಾರದ ಬಗ್ಗೆ ಚಿಂತಿಸಿದ ಮೋಹನ ಆಳ್ವರು ತಮ್ಮ ನುಡಿಸಿರಿಯ ಮೂಲಕ ಇದಕ್ಕೊಂದು ನ್ಯಾಯ ನೀಡುವತ್ತ ಚಿತ್ತ ಹರಿಸಿದ್ದು ಪ್ರಾಮುಖ್ಯ.
ಈ ಬಾರಿಯ ನುಡಿಸಿರಿಯ ಕೊನೆಯ ದಿನ ಡಿಸೆಂಬರ್ 3ರಂದು ದೊಡ್ಡ ಮಟ್ಟದ ಉದ್ಯೋಗ ಸಿರಿಯೆಂಬ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 1ನೇ ತರಗತಿಯಿಂದ 10ನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸುವುದೇ ಈ ಮೇಳದ ಮುಖ್ಯ ಉದ್ದೇಶ. ಇಷ್ಟೇ ಅಲ್ಲದೆ ಕನ್ನಡ ನಾಡಿನಲ್ಲಿದ್ದೇ ಸಂಸ್ಥೆ ನಡೆಸುತ್ತಿರುವ ವಿವಿಧ ಕಂಪೆನಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿ ಇದು ಮೂಡಿಬರಲಿದೆ ಎಂಬುದು ಡಾ.ಆಳ್ವರ ಅಭಿಮತ.

100ಕಂಪೆನಿಗಳು-ಸಹಸ್ರಾರು ಉದ್ಯೋಗಗಳು…
ನುಡಿಸಿರಿಯ ಸಂದರ್ಭದಲ್ಲಿ ಮಾತ್ರ ಆಯೋಜಿಸಲಾದ ಉದ್ಯೋಗ ಸಿರಿಯಲ್ಲಿ ವಿವಿಧ ನೂರು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ. ಈಗಾಗಲೇ ಈ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದ್ದು ಉತ್ತಮ ಸ್ಪಂದನೆ ಲಭ್ಯವಾಗಿದೆ. ಸಹಸ್ರಾರು ಉದ್ಯೋಗಾಕಾಂಕ್ಷಿಗಳಿಗೆ ಈ ಉದ್ಯೋಗ ಸಿರಿಯ ಮೂಲಕ ಉದ್ಯೋಗ ಪ್ರಾಪ್ತವಾಗಲಿದೆ. ಕನ್ನಡ ಕಲಿತ ವಿದ್ಯಾರ್ಥಿಗಳಿಗೇ ಈ ಉದ್ಯೋಗಮೇಳ ಸೀಮಿತವಾಗಿರಲಿದೆ. ಆಯ್ಕೆ ಪ್ರಕ್ರಿಯೆಯಲ್ಲೂ ಹತ್ತನೇ ತರಗತಿಯ ತನಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರನ್ನು ಆದ್ಯತೆಯ ನೆಲೆಯಲ್ಲಿ ಆಯ್ಕೆ ಮಾಡುವ ಭರವಸೆಯನ್ನು ಸಂಸ್ಥೆಗಳು ನೀಡಿವೆಯಂತೆ. ಕನ್ನಡ ನಾಡಿನಲ್ಲಿರುವ ವಿವಿಧ ಸಂಸ್ಥೆಗಳಿಗೆ ಕನ್ನಡಿಗರ , ಕನ್ನಡ ನಾಡಿನ ಋಣ ಸಂದಾಯ ಮಾಡಲು ಇದೊಂದು ಸುವಣರ್ಾವಾಕಾಶವಾಗಿದೆ.

  • `ಉದ್ಯೋಗ ಸಿರಿ’ ಎಂಬ ಒಂದು ದಿನದ ಉದ್ಯೋಗಮೇಳ
  • ಕೆಲವೇ ದಿನಗಳಲ್ಲಿ ಉದ್ಯೋಗಾಕಾಂಕ್ಷಿಗಳ ನೋಂದಣಿ ಆರಂಭ
  • 100 ಸಂಸ್ಥೆಗಳು, ಸಹಸ್ರಾರು ಉದ್ಯೋಗಗಳು
  • ಆಳ್ವಾಸ್ ಪ್ರಗತಿ ಉದ್ಯೋಗಮೇಳದ ಮಾದರಿಯಲ್ಲೇ ಈ ಉದ್ಯೋಗಮೇಳ
  • ವರ್ಷದುದ್ದಕ್ಕೂ ಆಳ್ವಾಸ್ನಲ್ಲಿ ವಿವಿಧ ಪ್ಲೇಸ್ಮೆಂಟ್ ಕಾರ್ಯಗಳು