Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಈ ಬಾರಿ ಕಣಿಲೆಗೆ ಸಕತ್ ಬೇಡಿಕೆ

#Bamboo-Shoots#bamboo#vaarte#special#story

ವಾರ್ತೆ ವಿಶೇಷ: ಹರೀಶ್ ಕೆ.ಆದೂರು

ಮುಂಗಾರು ಮಳೆ ಬೀಳುತ್ತಿದ್ದಂತೆಯೇ ಸಿಡಿಲಾರ್ಭಟ ಜೋರಾಗುತ್ತಿದ್ದಂತೆಯೇ ಬಿದಿರ ಮೆಳೆಗಳಲ್ಲಿ ಭೂಮಿ ಸೀಳಿ ಹೊರ ಬರುತ್ತದೆ ಬಿದಿರ ಕಂದಮ್ಮಗಳು! ಅದುವೇ ಕಣಿಲೆ, ಕಳಲೆ ಎಂದು ಕರೆಯಲ್ಪಡುತ್ತವೆ. ಅತ್ಯಂತ ರುಚಿಕರ ಆಹಾರವೂ ಹೌದು. ದಕ್ಷಿಣ ಕನ್ನಡ, ಕೊಡಗು, ನೆರೆಯ ಕಾಸರಗೋಡು ಕೇರಳಗಳಲ್ಲಿನ ಮಂದಿ ಈ ಕಣಿಲೆ ಆಹಾರಕ್ಕೆ ಹಾತೊರೆಯುತ್ತಿರುತ್ತಾರೆ. ವರ್ಷಕ್ಕೊಂದು ಬಾರಿಯಾದರೂ ಕಣಿಲೆ ತಿನ್ನಲೇ ಬೇಕೆಂಬುದು ತುಳನಾಡಿಗರ ತೀಮರ್ಾನ!. ಕಣಿಲೆ ಉತ್ತಮ ಪೌಷ್ಠಿಕ ಆಹಾರವೂ ಹೌದು. ಔಷಧವೂ ಹೌದು. ಆಷಾಢ ಮಾಸದಲ್ಲಿ ಕಣಿಲೆ ತಿನ್ನಬೇಕೆಂಬ ರೂಢಿಯೂ ಹಲವೆಡೆಗಳಲ್ಲಿವೆ.

ಮಳೆಯಾರ್ಭಟ ಹೆಚ್ಚಾಗಿದ್ದ ಹಿಂದಿನ ಕಾಲದಲ್ಲಿ ಪೇಟೆ ಪಟ್ಟಣಗಳಿಗೆ ಹೋಗುವ ವಾಹನ ಸೌಕರ್ಯಗಳಿಲ್ಲದ ಸಂದರ್ಭಗಳಲ್ಲಿ ಕಣಿಲೆ , ಕೆಸುವು ಮೊದಲಾದ ಸ್ಥಳೀಯ ವಸ್ತುಗಳೇ ಆಹಾರ ವಸ್ತುಗಳಾಗಿದ್ದವು. ಹಾಗೆ ಜನಪ್ರಿಯತೆ ಪಡೆದ ಕಣಿಲೆ ಇಂದು ಬಹು ಬೇಡಿಕೆಯ ಆಹಾರ ಪದಾರ್ಥವಾಗಿ ಪರಿವರ್ತನೆಯಾಗಿದೆ. ಎಷ್ಟೆಂದರೆ ದೊಡ್ಡ ದೊಡ್ಡ ಮಾಲ್ಗಳಲ್ಲಿ, ತರಕಾರಿ ಅಂಗಡಿಗಳಲ್ಲಿ `ಕಣಿಲೆ’ ಮಾರಾಟ ಭರ್ಜರಿಯಾಗಿ ಸಾಗುತ್ತವೆ. ಕಣಿಲೆ ಉಷ್ಣಪ್ರಬೇಧದ ತರಕಾರಿ. ಈ ಕಾರಣಕ್ಕಾಗಿ ಮಳೆಗಾಲದಲ್ಲಿ ಹೆಚ್ಚು ಹೆಚ್ಚು ಇದರ ಬಳಕೆಯಾಗುತ್ತದೆ. ಮಳೆಗಾಲದಲ್ಲಿ ಬಿದಿರ ಮೆಳೆಗಳಲ್ಲಿ ಎಳೆಬಿದಿರು ಹುಟ್ಟುವ ಸಮಯವೂ ಹೌದು.

ಈ ಬಾರಿ ಬಿದಿರೇ ಇಲ್ಲ…ಇನ್ನು ಕಣಿಲೆ ಎಲ್ಲಿ?

31moodbidri story photo1
ಕಳೆದ ಎರಡು ಮೂರು ವರುಷಗಳಿಂದ ಎಲ್ಲೆಂದರಲ್ಲಿ ಬಿದಿರು ನಾಶವಾಗಿ ಹೋಗಿವೆ. ಬಿದಿರಕ್ಕಿಯಾಗಿ ಬಿದಿರ ಮೆಳೆಗಳು ಒಣಗಿ ಹೋದ ಹಿನ್ನಲೆಯಲ್ಲಿ ಹೊಸ ಬಿದಿರ ಮೆಳೆಗಳು ಮೆಲ್ಲನೆ ಮೇಲೇಳುತ್ತಿವೆಯಷ್ಟೇ .ಅಳಿದುಳಿದ ಕೆಲವೊಂದು ವಿರಳ ಬಿದಿರ ಮೆಳೆಗಳಲ್ಲಿ ಕಣಿಲೆ ಕಾಣಸಿಗುವ ಸಾಧ್ಯತೆಯಿದೆ. ಆ ಕಾರಣದಿಂದಾಗಿಯೇ ಈ ಬಾರಿ ಕಣಿಲೆಗೆ ಭರ್ಜರಿ ಬೇಡಿಕೆ ಬರುವದಂತೂ ಸತ್ಯ.

ಅನನಾಸ್ಗಾಗಿ ಬಿದಿರು ನಾಶ!
ನೆರೆಯ ಕೇರಳದಿಂದ ಕರ್ನಾಟಕದ ಹಲವು ಭಾಗಗಳಿಗೆ ಬಂದ ಕೇರಳೀಯ ಕೃಷಿಕರು ಇಲ್ಲಿನ ಹಲವು ಭೂಮಿಗಳನ್ನು ಲೀಸ್ ಮೂಲಕ ಪಡೆದು ಅನನಾಸ್ ಕೃಷಿ ಪ್ರಾರಂಭಿಸಿದ್ದು ದೊಡ್ಡ ಸುದ್ದಿ. ಈ ಕೃಷಿಗಾಗಿ ನಿಬಿಢವಾಗಿ ಬೆಳೆದಿದ್ದ ಬಿದಿರ ಮೆಳೆಗಳನ್ನೂ ಸೇರಿದಂತೆ ಹಲವು ಗಿಡಮರಗಳನ್ನು ಕಡಿದ ಫಲವಾಗಿ ಇಂದು ದೊಡ್ಡ ಪ್ರಮಾಣದಲ್ಲಿ ಬಿದಿರು ನಾಶಹೊಂದಿದೆ. ಹೂಬಿಟ್ಟ ಬಿದಿರ ಮೆಳೆಗಳು ತನ್ನ ಜೀವಿತಾವಧಿ ಪೂರೈಸಿ ಒಣಗಿ ನಿಂತಿವೆ. ಹೀಗಾಗಿ ಸಾಮಾನ್ಯವಾಗಿ ಬಿದಿರ ಮೆಳೆಗಳು ನಾಶವಾಗಿ ಹೋಗಿವೆ.

ರಸ್ತೆ ಬದಿ ಮಾರಾಟ!
ಮಂಗಳೂರು ಬೆಂಗಳೂರು ಹೆದ್ದಾರಿಯ ಉಜಿರೆ, ಮುಂಡಾಜೆ, ಚಾರ್ಮಾಡಿ ಘಾಟ್, ಶಿರಾಡಿ ಘಾಟ್ , ಗುಂಡ್ಯ, ಸುಳ್ಯ, ಉಪ್ಪಿನಂಗಡಿ ಭಾಗಗಳಲ್ಲಿ ಮಳೆಗಾಲದಲ್ಲಿ ರಸ್ತೆ ಬದಿಗಳಲ್ಲಿ ಕಣಿಲೆ ವ್ಯಾಪಾರ ಜೋರಾಗಿಯೇ ಸಾಗುತ್ತದೆ. ಹೆಬ್ರಿ, ಸೋಮೇಶ್ವರ, ಆಗುಂಬೆ ಪ್ರದೇಶದಲ್ಲೂ ಕಣಿಲೆ ವ್ಯಾಪಾರ ಕಂಡು ಬರುತ್ತದೆ. ಮಳೆಗಾಲದಲ್ಲಿ ಸಂತೆಗಳಲ್ಲೂ ಈ ಕಣಿಲೆ ಜೋರಾಗಿಯೇ ಮಾರಾಟವಾಗುತ್ತವೆ. ತರಕಾರಿ ಅಂಗಡಿಗಳಲ್ಲೂ ಲಭ್ಯವಾಗುತ್ತವೆ. ದೂರದೂರುಗಳಿಂದ ಬಂದವರು, ಪೇಟೆಯಲ್ಲಿ ನೆಲೆಸಿದ ಮಂದಿ ಮುಗಿಬಿದ್ದು ಕಣಿಲೆ ಖರೀದಿಸುವುದು ಸಾಮಾನ್ಯ.

31 story photo

ಕೆಲವೊಂದು ಕಾಡುಗಳಲ್ಲಿ ಕೆಲವು ಪ್ರಬೇಧದ ಬಿದಿರುಗಳು ಇನ್ನೂ ಉಳಿದುಕೊಂಡಿವೆ. ಕೆಲವೊಂದು ನರ್ಸರಿಗಳಲ್ಲಿ ಬಿದಿರನ್ನು ಬೆಳೆಯುತ್ತಿದ್ದಾರೆ. ಆಹಾರ ಪದಾರ್ಥಕ್ಕಾಗಿಯೇ ಕೆಲವೊಂದು ಬಿದಿರುಗಳಿವೆ. ಅಂತಹ ಜಾತಿಯ ಬಿದಿರ ಮೆಳೆಗಳಲ್ಲಿ ಹುಟ್ಟುವ ಕಣಿಲೆ ಹೆಚ್ಚು ರುಚಿಕರವಾಗಿರುತ್ತವೆ. ಮೂಡಬಿದಿರೆಯ ಸೋನ್ಸ್ ಫಾರ್ಮ್ಸ್ಮ್ಸನಲ್ಲಿ ನಲುವತ್ತಕ್ಕೂ ಅಧಿಕ ಜಾತಿಯ ಬಿದಿರುಗಳಿವೆ. ಅವುಗಳಲ್ಲಿ ಕಣಿಲೆಗಾಗಿಯೇ ಇರುವವರು ಹಲವು!