Headlines

ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ * ಅಂತರ್ ಕಾಲೇಜು ಸಾಫ್ಟ್ ಬಾಲ್ ಟೂರ್ನಮೆಂಟ್ ಆರಂಭ * ವಿಶೇಷ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ * ವರ್ಣವೈವಿಧ್ಯ ಚಿತ್ತಾಕರ್ಷದ ಆಳ್ವಾಸ್ ವಿರಾಸತ್ * ವಿರಾಸತ್ ಗೌರವ * ಬೇಲಾಡಿ ರಾಮಚಂದ್ರ ಆಚಾರ್ಯ ನಿಧನ * ವಿವೇಕಾನಂದ ಜಯಂತಿ * 79.5ಕೋಟಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ * ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಉದ್ಘಾಟನೆ * ಸೇವೆಯಲ್ಲಿ ಬದಲಾವಣೆ ತಂದ ಹೆಗ್ಗಳಿಕೆ ರೋಟರಿಯದ್ದು – ಡಾ.ಹೆಗ್ಗಡೆ *

ಈವರೆಗಿನ ರಾಷ್ಟ್ರಪತಿಗಳು…

generl-knowgde

ಜ್ಞಾನ ವಾರ್ತೆ

ಮುಂದುವರಿದ ಭಾಗ…

ಆಗಸ್ಟ್ 1947ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಯಿತು. ಆಗ ಇನ್ನೂ ಅಧ್ಯಕ್ಷರ ಪದವಿ ಇರಲಿಲ್ಲ. ಭಾರತ ಸ್ವತಂತ್ರವಾಗಿದ್ದರೂ ಅಧಿಕೃತವಾಗಿ ಬ್ರಿಟಿಷ್ ಚಕ್ರವರ್ತಿಯ ಪ್ರತಿನಿಧಿಯಾಗಿ ಭಾರತದಿಂದ ನೇಮಿತರಾದ “ಗವರ್ನರ್ ಜನರಲ್ ” ಪದವಿಯಲ್ಲಿ ಒಬ್ಬರು ಇರಬೇಕಾಗಿದ್ದಿತು. ಸ್ವತಂತ್ರ ರಾಷ್ಟ್ರಕ್ಕೆ ಇದು ಒಪ್ಪುವ೦ಥದ್ದಲ್ಲವೆಂಬ ಅಭಿಪ್ರಾಯ ಅನೇಕರಲ್ಲಿ ಇತ್ತು. ಜನವರಿ 1949ರಲ್ಲಿ ಜವಾಹರಲಾಲ್ ನೆಹರುರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

 

president-of-indai

 

ಈವರೆಗೆ ಭಾರತದಲ್ಲಿ 14 ರಾಷ್ಟ್ರಪತಿಗಳು ಆಳ್ವಿಕೆ ನಡೆಸಿದ್ದಾರೆ.

ರಾಷ್ಟ್ರಪತಿಗಳ ವಿವರ:

ಡಾ ರಾಜೇಂದ್ರ ಪ್ರಸಾದ್- ಜನವರಿ 26, 1950 ರಿಂದ ಮೇ 13, 1962

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮೇ 13, 1962ರಿಂದ ಮೇ 13 1967

ಡಾ.ಜಾಕಿರ್ ಹುಸೇನ್ ಮೇ. 13, 1967 ರಿಂದ ಮೇ3 1969

ವರಾಹಗಿರಿ ವೆಂಕಟ ಗಿರಿ ಮೇ3, 1969 ರಿಂದ ಜುಲೈ 1969

ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969ರಿಂದ ಆಗಸ್ಟ್ 24,1969

ವರಾಹಗಿರಿ ವೆಂಕಟಗಿರಿ  ಆಗಸ್ಟ್ 24, 1969ರಿಂದ ಆಗಸ್ಟ್ 24, 1974

ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977

ಬಿ ಡಿ ಜತ್ತಿ ಫೆಬ್ರವರಿ 11,1977ರಿಂದ ಜುಲೈ 25, 1977

ನೀಲಂ ಸಂಜೀವ ರೆಡ್ಡಿ ಜುಲೈ 25, 1977ರಿಂದ ಜುಲೈ 25, 1982

ಗ್ಯಾನಿ ಜೈಲ್ ಸಿಂಗ್ ಜುಲೈ 25, 1982ರಿಂದ ಜುಲೈ 25, 1987

ರಾಮಸ್ವಾಮಿ ವೆಂಕಟರಾಮನ್ ಜುಲೈ 25, 1987ರಿಂದ ಜುಲೈ 25 1992

ಡಾ.ಶಂಕರ ದಯಾಳ ಶರ್ಮ ಜುಲೈ 25, 1992ರಿಂದ ಜುಲೈ 25, 1997

ಡಾ. ಕೆ ಆರ್ ನಾರಾಯಣ್ ಜುಲೈ 25,1997ರಿಂದ ಜುಲೈ 25, 2002

ಡಾ. ಎ ಪಿ ಜೆ ಅಬ್ದುಲ್ ಕಲಾಂ ಜುಲೈ 25, 2002ರಿಂದ ಜುಲೈ 25 2007

ಪ್ರತಿಭಾ ಪಾಟೀಲ್ ಜುಲೈ 25, 2007ರಿಂದ ಜುಲೈ25, 2012

ಪ್ರಣಬ್ ಮುಖರ್ಜಿ ಜುಲೈ 25, 2012ರಿಂದ ಪ್ರಸಕ್ತ