Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಇಲ್ಲಿ ಒಂದಲ್ಲಾ ಎರಡಲ್ಲಾ…ಸಮಸ್ಯೆಗಳೋ…ಸಮಸ್ಯೆಗಳು!

#siddakatte#road#rashmitha

ಸ್ಟೂಡೆಂಟ್ ರಿಪೋರ್ಟ್: ವಿಶೇಷ ವರದಿ

ಸಮಸ್ಯೆಯ ಸುಳಿಯಲ್ಲಿ ಬಂಟ್ವಾಳ ತಾಲೂಕು. ಹೌದು…ಇಲ್ಲಿ ಒಂದಲ್ಲಾ ಎರಡಲ್ಲಾ…ಸಮಸ್ಯೆಗಳೇ ಎಲ್ಲಾ ಎಂದರೂ ತಪ್ಪಲ್ಲ…ಹಾಗಿವೆ ಇಲ್ಲಿನ ಸಮಸ್ಯೆಗಳು…ಮೆಟ್ಟು ಮೆಟ್ಟಿಗೂ ಸಮಸ್ಯೆಗಳು. ಇಲ್ಲಿನ  ಎಲಿಯನಡುಗೋಡು ಗ್ರಾಮದಲ್ಲಿ ಹಲವು ಸಮಸ್ಯೆಗಳು ಕಾಣಸಿಗುತ್ತವೆ.  ಸಿದ್ದ ಕಟ್ಟೆಯಿಂದ ವೇಣೂರು ಹೋಗುವ ದಾರಿ ಮಧ್ಯೆ ಇದೆ ಎಲಿಯನಡುಗೋಡು. ಇಲ್ಲಿಯ ಜನರು ಸಮಸ್ಯೆಯ ಸುಳಿಯಲ್ಲಿ ಬದುಕುತ್ತಿದ್ದಾರೆ .

ಸಮಸ್ಯೆ 1: ಮಾರ್ಗ ಸರಿ ಇಲ್ಲದೇ ನಡೆದುಕೊಂಡು ಹೋಗಲಿಕ್ಕೆ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ತುಂಬಾ ಕಷ್ಟವಾಗಿದೆ .ಮಾರ್ಗ ಸರಿ ಇಲ್ಲದೆ ವಾಹನ ಸಂಚಾರಕ್ಕೂ ಕಷ್ಟ .ಇದರಿಂದಾಗಿ ದಿನೋಪಯೋಗಿ ವಸ್ತುಗಳ ಖರೀದಿ, ನಿತ್ಯ ಪ್ರಯಾಣವೂ ಸೇರಿದಂತೆ, ಆಸ್ಪತ್ರೆ ಸಂಚಾರ ಎಲ್ಲದಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಕೊಂಚ ಮಳೆ ಬಿದ್ದರೆ ಸಾಕು ರಸ್ತೆ ಕೆಸರುಗದ್ದೆಯಾಗಿ ಪರಿವರ್ತನೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗುತ್ತದೆ.

ಸಮಸ್ಯೆ2: ಒಂದೆಡೆ ರಸ್ತೆ ಅವ್ಯವಸ್ಥೆ ಮತ್ತೊಂದೆಡೆ ಬೀದಿ ದೀಪದ ಅವ್ಯವಸ್ಥೆ. ಹಲವೆಡೆಗಳಲ್ಲಿ ಬೀದಿ ದೀಪಗಳೇ  ಇಲ್ಲದಿರುವುದರಿಂದ  ನಡುಗೋಡು ಗ್ರಾಮದ ಜನರಿಗೆ ಕಷ್ಟಕರವಾಗಿದೆ .ರಾತ್ರಿ ಹೊತ್ತು ಕೆಲಸ ಬಿಟ್ಟು ಬರುವ ಜನತೆ, ತೊಂದರೆಗೊಳಗಾಗುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

  • ರಶ್ಮಿತಾ