Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಇಲ್ಲಗಳನ್ನು ತುಂಬುವ ಮೂಡಬಿದಿರೆ ಹೆರಿಟೇಜ್ ಪೋರ್ಟಲ್

moodbidire_vaarte_taluq

ವಾರ್ತೆ ವಿಶೇಷ: ಹರೀಶ್ ಕೆ.ಆದೂರು
ಹಲವು ಕೌತುಕಗಳಿಗೆ ಕಾರಣವಾದ, ಶಿಲ್ಪಕಲೆಗಳ ಆಗರವಾದ, ಪುರಾತನ ನಿಶಿಧಿ, ದೇಗುಲ, ಬಸದಿಗಳ ಬೀಡಾದ ಮೂಡಬಿದಿರೆಯ ಸಮಗ್ರ ಮಾಹಿತಿ ಇನ್ನು ಮುಂದೆ ಬೆರಳ ತುದಿಯಲ್ಲಿ ಸಿಗಲಿದೆ. ಇಷ್ಟೇ ಏಕೆ ದೇಶ ವಿದೇಶಗಳಿಂದ ದಿನಂಪ್ರತಿ ವಿವಿಧ ಕಾರಣಗಳಾಗಿ ಮೂಡಬಿದಿರೆಗೆ ಆಗಮಿಸುವ ಮಂದಿಗೆ ಇಲ್ಲಿನ ದೇಗುಲ, ಬಸದಿ, ಕೆರೆಗಳಾದಿಯಾಗಿ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಯೂ ಲಭ್ಯವಾಗಲಿದೆ. ತನ್ಮೂಲಕ ಈ ತನಕ `ಇಲ್ಲ’ ಎಂಬಂತಿದ್ದ ಅಂತರವನ್ನು ಈ ವೆಬ್ ಪೋರ್ಟಲ್ ತುಂಬಲಿದೆ.

 

 

ಮೂಡಬಿದಿರೆ ಐತಿಹ್ಯದ ತಾಣವಾಗಿದೆ. ಹದಿನೆಂಟು ಕೆರೆ, ಹದಿನೆಂಟು ದೇಗುಲ, ಹದಿನೆಂಟು ಬಸದಿ, ಪುರಾತನ ಜೈನ ನಿಷಿಧಿಗಳು, ಸಂರಕ್ಷಿತ ಸ್ಮಾರಕಗಳು, ಸಮಾಧಿಗಳು, ವಾಸ್ತು ವೈಭವದ ಸಾವಿರ ಕಂಬದ ಬಸದಿ, ಅತ್ಯಪೂರ್ವ ಜಿನ ಚೈತ್ಯಾಲಯಗಳು, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೃಷಿ ಪ್ರಧಾನ ಕೇಂದ್ರಗಳು, ಪಿಕ್ ನಿಕ್ ಸ್ಪಾಟ್ಗಳು, ಸಂಶೋಧನಾ ಕೇಂದ್ರಗಳು ಹೀಗೆ ಹತ್ತು ಹಲವು ವಿಚಾರಗಳಿಂದ ಮೂಡಬಿದಿರೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಸರಿಯಾದ ಮಾರ್ಗದರ್ಶನ ನೀಡುವವರ ಕೊರತೆ, ಮಾಹಿತಿಯ ಕೊರತೆಯಿಂದಾಗಿ ಮೂಡಬಿದಿರೆ ಪ್ರವಾಸೀ ದೃಷ್ಠಿಯಿಂದ ಮಹತ್ವದ ಬೆಳವಣಿಗೆ ಸಾಧಿಸುವಲ್ಲಿ ವಿಫಲವಾಗಿದೆ. ಇನ್ನು ಮುಂದೆ ಇದಕ್ಕೆಲ್ಲ ಶಾಶ್ವತ ಪರಿಹಾರ ಸದ್ಯದಲ್ಲೇ ಲಭ್ಯವಾಗಲಿದೆ.

 

 

 

ಬೆಲ್ಜಿಯಂ ಮಾದರಿಯಲ್ಲಿ ಸಮಗ್ರ ಮಾಹಿತಿ ಪೋರ್ಟಲ್
ಟೀಂ ಹೆರಿಟಾ ಬೆಲ್ಜಿಯಂ ಸಮಗ್ರ ಮಾಹಿತಿ ಪೋರ್ಟಲ್ ಸಿದ್ಧಪಡಿಸಿ ಸಮಾಜಕ್ಕರ್ಪಿಸಿದೆ. ಇದು ಅಲ್ಲಿಯ ಸಂಸ್ಕೃತಿ, ಮಾಹಿತಿ, ವಿಚಾರಗಳನ್ನು ಸಮರ್ಪಕವಾಗಿ ಪ್ರವಾಸಿಗರಿಗೆ ತಲುಪಿಸುವಲ್ಲಿ ಸಹಕಾರಿಯಾಗಿದೆ. ಅದೇ ಮಾದರಿಯಲ್ಲಿ ಐತಿಹ್ಯಗಳ ಆಗರ ಮೂಡಬಿದಿರೆಯ ಸಮರ್ಪಕ ಮಾಹಿತಿಯನ್ನು ತಿಳಿಸುವ `ಮೂಡಬಿದಿರೆ ಹೆರಿಟೇಜ್’ ಪೋರ್ಟಲ್ ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
ಮೂಡಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಈ ಮಹತ್ವದ ಕಾರ್ಯಕ್ಕೆ ಕೈಯಿಕ್ಕಿದೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಇತಿಹಾಸ ವಿಭಾಗ, ಪತ್ರಿಕೋದ್ಯಮ ವಿಭಾಗ, ಕಂಪ್ಯೂಟರ್ ಸಾಯನ್ಸ್ ವಿಭಾಗದ ಸಹಕಾರ ಪಡೆದು ಅತ್ಯಂತ ಅರ್ಥಪೂರ್ಣ, ಮಾಹಿತಿಪೂರ್ಣ ಪೋರ್ಟಲ್ ಕಾರ್ಯ ಸಂಶೋಧನಾತ್ಮಕ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.

 

 

ಮಾರ್ಗದರ್ಶನ
`ದ ಇಂಡಿಯ ಪ್ಲಾಟ್ಫೋರಂ’ನ ಪ್ರೊ.ಡಾ.ಎಸ್.ಎನ್ ಬಾಲಗಂಗಾಧರ್ ಅವರ ಮಾರ್ಗದರ್ಶನದಲ್ಲಿ ಈ ಪೋರ್ಟಲ್ ನಿರ್ಮಾಣವಾಗಲಿದೆ. ಒಂದೊಮ್ಮೆ ವೈಭವದಿಂದ ಮೆರೆದಿದ್ದ ಮೂಡಬಿದಿರೆ ಸಮಗ್ರ ವಿಚಾರಗಳು ವಿಶ್ವದ ಜನತೆಗೆ ಲಭ್ಯವಾಗಲಿದೆ.

 

 

 

ಇದೊಂದು ಟೀಂ ವರ್ಕ್
ಸಾಕಷ್ಟು ಜನ ಪ್ರತೀ ದಿನ ಮೂಡಬಿದಿರೆಗೆ ಬರುತ್ತಾರೆ. ಆದರೆ ಸೂಕ್ತ ಮಾಹಿತಿ ಕೊರತೆ ಪ್ರತಿಯೊಬ್ಬರಿಗೂ ಕಾಡುತ್ತಿತ್ತು. ಆ ಸಮಸ್ಯೆಯನ್ನು ತುಂಬುವ ಕಾರ್ಯವನ್ನು ನಾವು ಮಾಡುತ್ತೇವೆ. ಎಲ್ಲರ ಸಹಕಾರ ನಮಗೆ ಇರಲಿ
– ವಿವೇಕ್ ಆಳ್ವ
ಮ್ಯಾನೇಜಿಂಗ್ ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

vinaya alva