Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಇದೊಂದು ಮಾದರಿ ಮಾರುಕಟ್ಟೆ…

mood_local agri market

ಕ್ಲಿಕ್ ಆಯ್ತು ಈ ಸಿಂಪಲ್ ಮಾರ್ಕೆಟ್!

ವಾರ್ತೆ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು

ಬೆಳ್ಳಂ ಬೆಳಗ್ಗೆಯೇ ಜನ `ಇವರು ಯಾವಾಗ ಬರ್ತಾರೆ’ ಎಂದು ಕಾಯ್ತಾ ಇರ್ತಾರೆ!… ಅಲ್ಲಿ ಹಸಿ ಹಸಿ ಬಸಳೆಯಿದೆ… ಈಗ ತಾನೇ ಗದ್ದೆಯಿಂದ ಕಿತ್ತುತಂದ ಹಸಿರ ಹರಿವೆ ಸೊಪ್ಪು , ಬಾಳೆ ದಿಂಡು, ಕುಂಡಿಗೆ(ಬಾಳೆ ಹೂ), ತಿಮರೆ(ಒಂದೆಲಗ), ಪುನರ್ ಪುಳಿ, ಕಾಡುಮಾವು, ಹಸಿ ಹಸಿ ಬೆಂಡೆ, ಅಲಸಂಡೆ…ಹೀಗೆ ಹತ್ತು ಹಲವು ಸ್ಥಳೀಯ ತರಕಾರಿಗಳು! … ಸಾವಯವ ಕೃಷಿ ಉತ್ಪನ್ನಗಳು… ಇದೆಲ್ಲವೂ ಫ್ರೆಶ್ ಫ್ರೆಶ್… ನೋಡುವಾಗಲೇ ಬಾಯಲ್ಲಿ ನೀರೂರಿಸುವಂತಹ ಊರ ತರಕಾರಿಗಳು… ಜನ ಕ್ಯೂ ನಿಂತು ಕಾಯುತ್ತಾರೆ… ದೊಡ್ಡ ದೊಡ್ಡ ಚೀಲಗಳಲ್ಲಿ ಖರೀದಿಸಿ ಕೊಂಡೊಯ್ಯುತ್ತಾರೆ… ಕಳೆದ ಆರೇಳು ತಿಂಗಳುಗಳಿಂದ ಈ ದೃಶ್ಯ ಮೂಡಬಿದಿರೆಯ ಕೋ ಆಪರೇಟಿವ್ ಸರ್ವೀಸ್ ಬ್ಯಾಂಕ್ ಆವರಣದಲ್ಲಿ ಮಾಮೂಲಿ!

 

 
ಹೌದು ಕೋ ಆಪರೇಟಿವ್ ಸರ್ವೀಸ್ ಬ್ಯಾಂಕ್ ಕೃಷಿಕರ ಬಾಳಲ್ಲಿ ದೊಡ್ಡ ಆಶಾಕಿರಣ ಮೂಡಿಸಿದೆ. ಬೆಳೆಗಾರರಿಂದ ನೇರ ಗ್ರಾಹಕರಿಗೆ ಉತ್ಪನ್ನ ತಲುಪಿಸುವ ಹೊಸ ಯೋಜನೆಯೊಂದನ್ನು ರೂಪಿಸಿ ಯಶ ಸಾಧಿಸಿದೆ. ಇದು ವಾಣಿಜ್ಯ ದೃಷ್ಠಿಕೋನದ ತರಕಾರಿ ಮಾರುಕಟ್ಟೆಯಲ್ಲ. ಬ್ಯಾಂಕ್ ತನ್ನ ಬೃಹತ್ ಕಟ್ಟಡದ ಮುಂಭಾಗದಲ್ಲಿ ಸ್ಥಳೀಯ ರೈತರಿಗಾಗಿ ಸೂರು ಒದಗಿಸಿಕೊಟ್ಟಿದೆ. ಈ ಭಾಗದ ಯಾವುದೇ ರೈತ ಇಲ್ಲಿ ಬಂದು ತನ್ನ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ನೀಡಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಬೆಳೆಗಾರ ಯಾವುದೇ ಶುಲ್ಕ ಕಟ್ಟಬೇಕಾಗಿಲ್ಲ. ದಲ್ಲಾಳಿಗಳ ಕೈಯಿಂದ ರೈತರನ್ನು ಪಾರು ಮಾಡುವುದೇ ಈ ಬ್ಯಾಂಕ್ ನ ಪ್ರಮುಖ ಉದ್ದೇಶ. ಅದರೊಂದಿಗೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಲಿ ಎಂಬ ಮಹತ್ವಾಕಾಂಕ್ಷೆ.

 

 

 

ಅದ್ಭುತ ಯಶಸ್ಸು
ಮೂಡಬಿದಿರೆಯಲ್ಲಿ ಪುರಸಭಾ ಕೃಪಾಪೋಷಿತ ಮಾರುಕಟ್ಟೆ ಬಿಟ್ಟರೆ ಸ್ಥಳೀಯ ರೈತರಿಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಲ್ಲ. ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡುವುದಕ್ಕೂ ಅವಕಾಶವಿಲ್ಲ. ಒಂದೊಮ್ಮೆ ಕುಳಿತರೂ ಸುಂಕ ಕೊಡಬೇಕೆಂಬ ಸಂಕಟ. ಸ್ಥಳೀಯ ರೈತರಿಗಾಗಿ ಯಾರ್ಡ್ ಇಲ್ಲವೇ ಇಲ್ಲ. ಈ ಎಲ್ಲಾ ಸಂಕಷ್ಟಗಳಿಗೆ ಧ್ವನಿಯಾಗಿದ್ದು ಮೂಡಬಿದಿರೆ ಕೋ ಆಪರೇಟಿವ್ ಸರ್ವೀಸ್ ಬ್ಯಾಂಕ್. ಇದರ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಹಾಗೂ ಸರ್ವ ಸದಸ್ಯರು ಈ ಬಗ್ಗೆ ಚಿಂತಿಸಿ ಈ ಹೊಸ ಯೋಜನೆ ರೂಪಿಸಿದ್ದಾರೆ. ಮೂಡಬಿದಿರೆ ವ್ಯಾಪ್ತಿಯ ಹಳ್ಳಿಗಳ ಕೃಷಿಕರು ತಮ್ಮ ಉತ್ಪನ್ನಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಯಾರ ಹಂಗೂ ಇಲ್ಲದೆ ಉತ್ಪನ್ನಗಳನ್ನು ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

 

 

ಇನ್ನೂ ಒಂದು ಹೆಜ್ಜೆ ಮುಂದೆ
ಬ್ಯಾಂಕ್ ನ ಪ್ರವೇಶ ಧ್ವಾರದ ಮುಂಭಾಗದಲ್ಲಿ ಅತ್ಯಂತ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಮಾಡಿದೆ. ಇನ್ನೂ ಹೆಚ್ಚು ಮಂದಿ ಕೃಷಿಕರು ಬಂದರೆ ಕೆಳಭಾಗದಲ್ಲಿ ಮ್ಯಾಟ್ ಹಾಸಿ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಬ್ಯಾಂಕ್ ನ ಬದಿಯಲ್ಲಿಯೇ ರ್ಯಾಕ್ ವ್ಯವಸ್ಥೆ ಮಾಡಿ ಕೃಷಿಕರಿಗೆ ಇನ್ನಷ್ಟು ಮಾದರಿ ರೀತಿಯಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ಬಗ್ಗೆ ಬ್ಯಾಂಕ್ ಚಿಂತಿಸಿದೆ. ಒಟ್ಟಿನಲ್ಲಿ ಕೃಷಿಕರ ಉತ್ಪನ್ನಕ್ಕೆ ಸರಿಯಾದ ರೀತಿಯ ಮಾರುಕಟ್ಟೆ ಒದಗಿಸುವುದು ಈ ಬ್ಯಾಂಕ್ ನ ಒಂದು ಮಾದರೀ ಯೋಜನೆ.

 

 

 

ನೆಮ್ಮದಿಯಿದೆ…
ಬ್ಯಾಂಕ್ ನಮಗೊಂದು ದೊಡ್ಡ ಸಹಕಾರ ಮಾಡಿದೆ. ನಮ್ಮ ಬೆಳೆಗೆ ನ್ಯಾಯ ಸಿಕ್ಕಿದೆ. ಬೆಳೆ ಏನು ಮಾಡುವುದು ಎಂಬ ಚಿಂತೆ ನಮಗಿಲ್ಲ. ಖುಷಿಯಿಂದ ವ್ಯಾಪಾರ ಮಾಡುತ್ತಿದ್ದೇವೆ.
– ರಾಜು ಗೌಡ, ಮಿಜಾರು. ಕೃಷಿಕ.

 

 

 

ಕೃಷಿಕರಿಗೊಂದು ನ್ಯಾಯ
ಕೃಷಿಕರಿಗೆ ಅವರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ. ಅವರು ತಂದ ಉತ್ಪನ್ನಗಳು ಕೇವಲ ಒಂದು ಗಂಟೆಯೊಳಗೆ ಖಾಲಿಯಾಗುತ್ತಿರುವುದು ಕಳೆದ ಐದಾರು ತಿಂಗಳುಗಳಿಂದ ಗಮನಿಸುತ್ತಿದ್ದೇವೆ. ಉತ್ತಮ ಕೆಲಸ ಮಾಡಿದ್ರೆ ಜನ ಬೆಂಬಲ ಇದೆ ಎಂಬುದಕ್ಕೆ ಇದೇ ಒಂದು ಸಾಕ್ಷಿ.
– ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮೂಡಬಿದಿರೆ ಕೋ ಆಪರೇಟಿವ್ ಸರ್ವೀಸ್ ಬ್ಯಾಂಕ್.