Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಇದೂ ದುರಂತಕ್ಕೆ ಆಹ್ವಾನವಲ್ಲವೇ…???

#studnet#reporter#pappayi

ಸ್ಟೂಡೆಂಟ್ ರಿಪೋರ್ಟ್: ವಿಶೇಷ ವರದಿ

ಹೌದು…ಇಂದು ಪ್ರಕೃತಿಯ ನಾಶದಿಂದಾಗಿ ಒಂದಲ್ಲಾ ಒಂದು ಅನಾಹುತಗಳೇ ಸಂಭವಿಸುತ್ತಿವೆ. ಇದೆಲ್ಲವೂ ನಮ್ಮ ಕಣ್ಣ ಮುಂದೇ ಕಾಣುತ್ತಿದೆ. ಇಂತಹ ಸಮಯದಲ್ಲಿ ಪ್ರಾಣಿಗಳಾದರೂ ಏನು ಮಾಡುವುದು…ಒಂದೆಡೆ ಕಾಡು ನಾಶ…ಮತ್ತೊಂದೆಡೆ ಕಾಡು ಪ್ರಾಣಿಗಳಿಗೆ ಆಹಾರವಿಲ್ಲದೆ ಪರದಾಡುವ ಪರಿಸ್ತಿತಿ. ಇದರಿಂದಾಗಿ ಕಾಡು ಪ್ರಾಣಿಗಳು ನಾಡನ್ನಾಶ್ರಯಿಸುವ ಸ್ಥಿತಿ ಬಂದೊದಗಿದೆ.
ಒಂದೊಮ್ಮೆ ಹೇರಳವಾಗಿ ಬೆಳೆಯುತ್ತಿದ್ದ  ಪಪ್ಪಾಯ ಗಿಡ ಇಂದು ವಾನರರ ಅಟ್ಟಹಾಸಕ್ಕೆ ನಾಶವಾಗುತ್ತಿದೆ.ವಾನರರಿಗೆ ಈ ಗಿಡ ಪಂಚಪ್ರಾಣ.ತೋಟದ ಯಾವುದೇ ಮೂಲೆಯಲ್ಲಿದ್ದರೂ ಸಹ ಕಿತ್ತು ತಿನ್ನುತ್ತವೆ.ಹಾಗಾದರೆ ವಾನರರಿಗೆ ತಿಳಿದ ನಾಟಿಔಷಧೀಯ ಜ್ಞಾನ ಮಾನವನಲ್ಲಿ ಕಡಿಮೆಯಾಗುತ್ತಿದೆಯೇ?ಹೌದು ಸ್ನೇಹಿತರೇ ಇಂದಿನ ಆಧುನಿಕ ಜಾಲತಾಣಗಳಲ್ಲಿ ಮುಳುಗಿರುವ ಯುವ ಸಮಾಜಕ್ಕೆ ನಾಟಿಔಷಧೀಯ ಮಾಹಿತಿಯೂ ಕ್ಷೀಣಿಸುವಂತಿದೆ. ಅಲೋಪತಿ ಔಷಧಿಯನ್ನೇ ಅವಲಂಬಿಸುತ್ತಿರುವ ಇಂದಿನ ಜನಾಂಗ ನಾಟಿ  ಔಷಧಿಯತ್ತ ಅಲಕ್ಷ್ಯ ತೋರುತ್ತಿದ್ದಾರೆ.
ಹೌದು ಈ ಪಪ್ಪಾಯ ಗಿಡದಲ್ಲಿ ಹಾಗೂ ಹಣ್ಣಿನಲ್ಲಿ ಅತ್ಯದ್ಭುತ ಔಷಧ ಅಡಗಿದೆ.ಇದರ ಎಲೆಯನ್ನು ಹಿಂಡಿದ ರಸವನ್ನು ಒಂದು ಚಮಚದಂತೆ ವಾರಕ್ಕೆ ಮೂರು ಬಾರಿ ಸೇವಿಸುವುದರಿಂದ ಡೆಂಗಿ ಜ್ವರ ಬಾರದಂತೆ ತಡೆಯಬಹುದು.ಪಪ್ಪಾಯಿ ಹಣ್ಣಿನಲ್ಲಿರುವ ಬೀಜವನ್ನು ಸೇವಿಸುವುದರಿಂದ ಕರುಳಿನ ಸಮಸ್ಯೆ ಕ್ಯಾನ್ಸರ್ ಟ್ಯೂಮರ್ ಮತ್ತು ಕೈ ಕಾಲು ನೋವಿನ ಸಮಸ್ಯೆಯನ್ನು ತಡೆಯಬಹುದು.ಈ ಔಷಧಿಯು ಇಂಗ್ಲಿಷ್ ಔಷಧಿಗಿಂತ ಉತ್ತಮವಾಗಿದೆ .
ಆದರೆ ರೈತರು ಸಾಲ ಮಾಡಿಕೊಂಡು ಬೆಳೆದ ಬೆಳೆಗೆ ವಾನರರ ಲಗ್ಗೆ ಹೆಚ್ಚಾಗಿದೆ.ಇದಕ್ಕೆ ಮೂಲ ಕಾರಣವಾದ ಪಪ್ಪಾಯ ಗಿಡವನ್ನು ನಾಶ ಮಾಡಲಾಗುತ್ತಿದೆ ಎಲ್ಲ ರೋಗಕ್ಕೆ ಔಷಧಿಯನ್ನು ಒದಗಿಸುವ ಪಪ್ಪಾಯ ಗಿಡವನ್ನು ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ.

ಜಯಾನಂದ 
ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ