Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಇದು ಎಲ್ಲರನ್ನೂ ಬೆಚ್ಚಿಬೀಳಿಸೋ

22

ವಾರ್ತೆ.ಕಾಂ ಎಕ್ಸ್ ಕ್ಲೂಸಿವ್ ರಿಪೋರ್ಟ್

ಹೌದು..ಇದಂತೂ ಎಲ್ಲರನ್ನೂ, ಎಲ್ಲಾ ಪಕ್ಷದವರನ್ನೂ ಬೆಚ್ಚಿ ಬೀಳಿಸೋದು ಗ್ಯಾರಂಟಿ. ಆದ್ರೂ ಸತ್ಯ. ನಂಬಲೇ ಬೇಕಾದಂತಹ ಸತ್ಯ. ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಈ ಕ್ಷಣದಲ್ಲಿ ಚುನಾವಣೆ ಆದ್ರಂತೂ ಆಡಳಿತ ಪಕ್ಷ, ವಿರೋಧ ಪಕ್ಷ  ಎಲ್ಲಾ ಪಕ್ಷಗಳೂ ಮುಖಕ್ಕೆ ಮಸಿಬಳಿಸಿಕೊಳ್ಳೋದಂತೂ ಗ್ಯಾರಂಟಿ. ಜನ `ಥೂ…’ಎಂದು ಉಗಿದು ಬಿಡ್ತಾರೆ…ಈ ರೀತಿ ದೊಡ್ಡ ಆಘಾತಕಾರೀ ಬದಲಾವಣೆಗೆ ಜನ ಸಿದ್ದರಾಗಿದ್ದಾರೆ…ಇದು ರಾಜಕೀಯ ವಿಶ್ಲೇಷಕರು, ಖಾಸಗೀ ವಾಹಿನಿಯೊಂದು ನಡೆಸಿದ ಸಮೀಕ್ಷೆ ಹೇಳಿದ ಮಾತು.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯಕ್ಕೆ ಕೈಯಿಕ್ಕಿದೆ. ಈ ತನಕ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚಕಾರವೆತ್ತದ ವ್ಯಕ್ತಿಗಳೂ ಈಗ ಮಾತನಾಡಲಾರಂಭಿಸಿದ್ದಾರೆ. ಹಲವು ಮೀಟಿಂಗ್ ಗಳಲ್ಲಿ ಕಾಣದ ಪುರಸಭಾ ಸದಸ್ಯರು ಈಗೀಗ ಹಾಜರಾಗುತ್ತಿದ್ದಾರೆ. ಇದೆಲ್ಲವೂ ಚುನಾವಣಾ ಗಿಮಿಕ್!. ಮೀಡಿಯಾದವರ ಮುಂದೆ ಫೋಸ್ ನೀಡುತ್ತಾ ಉದ್ದುದ್ದ ಗಂಟಲು ಹರಿದುಕೊಳ್ಳುತ್ತಿದ್ದಾರೆ. ಆದರೆ ಇವರೇನೇ ಮಾಡಿದರೂ ಜನ ಮಾತ್ರ ಪುರಸ್ಕರಿಸೋದು ಇವರನ್ನಲ್ಲವಂತೆ!

ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 23ವಾರ್ಡ್ ಗಳಿವೆ. ಆಡಳಿತ ಪಕ್ಷದ ಚುಕ್ಕಾಣಿ ಕಾಂಗ್ರೆಸ್ ನದ್ದು. ವಿರೋಧ ಪಕ್ಷದಲ್ಲಿ ಬಿಜೆಪಿ ಜೆಡಿಎಸ್ ಇದೆ. ಸಿ.ಪಿ.ಐ.ಎಂ. ಕೂಡಾ ಇದೆ. ಆದರೆ ಇದ್ಯಾವುದೂ `ಪ್ರಭಲ’ವಿರೋಧ ಪಕ್ಷವಾಗಿಲ್ಲ. ಜನ ಓಟು ಹಾಕಿ ಗೆಲ್ಲಿಸಿ ಕಳುಹಿಸಿದವರ್ಯಾರೂ ಜನರ ಕೆಲಸವನ್ನು ಮಾಡಿಲ್ಲ. ಬದಲಾಗಿ ಸ್ವ ಭದ್ರತೆಯತ್ತ ಗಮನ ಹರಿಸಿದ್ದಾರಂತೆ. ಪ್ರತಿಯೊಂದಕ್ಕೂ ಕಮಿಷನ್ನು, ಆಡಳಿತ ಪಕ್ಷ ವಿರೋಧ ಪಕ್ಷ  ಎಲ್ಲರ ನಡುವೆಯೂ ಅಂಡರ್ ಸ್ಟ್ಯಾಡಿಂಗು…ಹೀಗೆ `ಹೊಂದಾಣಿಕೆಯೇ’ ನಮ್ಮ ಮೂಲಮಂತ್ರ ಎಂಬಂತೆ ನಾವೆಲ್ಲರೂ ಸಮಾನರು ಎಂಬ ಚಿಂತನೆಯ ಮೂಲಕ ಆಡಳಿತ ವಿಪಕ್ಷ  ಎರಡೂ ಕಾರ್ಯನಿರ್ವಹಿಸುತ್ತಿದೆ. ಈ ಕಾರಣಕ್ಕಾಗಿಯೇ ಪುರಸಭೆ ಎಂದರೆ  ಜನತೆಯ ಪಾಲಿಗೆ ಅಭಿವೃದ್ಧಿ ಮರೀಚಿಕೆಯಾದಂತಹ ವ್ಯವಸ್ಥೆಯಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಜನ ಸ್ಪಷ್ಟ ಉತ್ತರ ಕೊಡಲು ತಯಾರಾಗಿದ್ದಾರೆ. ಈಗಾಗಲೇ ಪ್ರಮುಖ ರಾಷ್ಟ್ರೀಯ ಪಕ್ಷೂ, ಪ್ರಾದೇಶಿಕ ಪಕ್ಷವೂ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರಂತೆ!. ಏನೇ ಇದ್ದರೂ ಜನಪರ ಕಾಳಜಿ ಉಳ್ಳಂತಹ ಯುವ ಸಮುದಾಯವನ್ನು ಪುರಸಭೆಯೊಳಗೆ ಆರಿಸಿ ಕಳುಹಿಸುವ ಸ್ಪಷ್ಟ ನಿರ್ಧಾರ ಜನತೆಯದ್ದಾಗಿದೆಯಂತೆ.

ಇಂದು ಹಣದಾಸೆಗೆ ತೋರಿಸಿ ಮತವನ್ನು ಖರೀದಿಸುವ ಹುನ್ನಾರವನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ ಎಂಬ ಆರೋಪವಿದೆ. ಆದರೆ ಜನ ಪ್ರಜ್ಞಾವಂತರಾಗಿದ್ದುಕೊಂಡು ತಮ್ಮ ಕೆಲಸ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಇರುವವರನ್ನೇ ಆರಿಸುವ ಸ್ಪಷ್ಟ ನಿರ್ಧಾರವನ್ನು ಮಾಡಿದ್ದು ನಿಜಕ್ಕೂ ಮೆಚ್ಚತಕ್ಕಂತಹುದು. ಸಮೀಕ್ಷೆ ನಿಜವಾಗಿದ್ದೇ ಆದಲ್ಲಿ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷಕ್ಕೆ ಮರ್ಮಾಘಾತವಾಗುವುದರಲ್ಲಿ ಸಂದೇಹವೇ ಇಲ್ಲ.  ಏನೇ ಆದರೂ ಬದಲಾವಣೆ ಆಗೋದಂತು ನಿಶ್ಚಿತ!