Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ!

#noodles makker

ಮತ್ತೆ ಹಳೆತನಕ್ಕೆ ಶಿಫ್ಟ್

ಹೌದು…ಮತ್ತೆ ಹಳೆತನಕ್ಕೆ ಶಿಫ್ಟ್… ವೇಗದ ಜಗತ್ತಿನಲ್ಲಿ ಫಾಸ್ಟ್ ಫೂಡ್, ಜಂಕ್ ಫೂಡ್ಗಳ ನಡುವೆಯೂ ಪಾರಂಪರಿಕ ಆಹಾರ ಕ್ರಮಗಳು ಮತ್ತೊಮ್ಮೆ ಜನಾಕರ್ಷಣೆ ಪಡೆಯುತ್ತಿವೆ. ಹಬ್ಬ ಹರಿದಿನಗಳಲ್ಲಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ನಡೆಸುವ ಹಲವು ಆಚರಣೆಗಳ ಮೂಲಕ ಪಾರಂಪರಿಕ ಆಹಾರ ಕ್ರಮವನ್ನು ಆಧುನಿಕ ಜೀವನ ಶೈಲಿಯಲ್ಲಿ ನೆನಪಿಸುವ ಕಾರ್ಯ ಕಳೆದ ಕೆಲ ವರುಷಗಳಿಂದ ಸಾಗುತ್ತಿದೆ. ಹೀಗಾಗಿ ಅಟ್ಟ ಸೇರಿದ್ದ ಹಳೆಯ ಪರಿಕರಗಳು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ.
ಏತನ್ಮಧ್ಯೆ ಹಳೆಯ ಮಾದರಿಯನ್ನೇ ಹೋಲುವ ಅತ್ಯಾಧುನಿಕ ರೀತಿಯ ಪೋರ್ಟೆಬಲ್ ಒತ್ತು ಶ್ಯಾವಿಗೆ ಮಣೆಯೊಂದು ಹಲವು ಆವಿಷ್ಕಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ!
ಹೌದು… ಹಿಂದಿನ ಕಾಲದಲ್ಲಿ ಮರದ ಶ್ಯಾವಿಗೆ ಮಣೆಯನ್ನು ಉಪಯೋಗಿಸಲಾಗುತ್ತಿತ್ತು. ಕಾಲ ಬದಲಾದಂತೆ ಅದರ ಸ್ಥಾನವನ್ನು ಕಬ್ಬಿಣ, ಸ್ಟೀಲ್ ಆಕ್ರಮಿಸಿಕೊಂಡಿತ್ತು. ಗಾತ್ರದಲ್ಲೂ ಸಾಕಷ್ಟು ಬದಲಾವಣೆಗಳಾದವು. ಆದರೆ ಅವೆಲ್ಲವುಗಳನ್ನೆಲ್ಲಾ ಮೀರಿನಿಂತು ಇದೀಗ ಮತ್ತೆ ಹಳೆಯ ಶೈಲಿಯ ಮರದ ಒತ್ತು ಶ್ಯಾವಿಗೆ ಮಣೆ ಮಾರುಕಟ್ಟೆಯಲ್ಲಿ ಭರ್ಜರಿ ಬ್ಯಾಟಿಂಗ್ ಆರಂಭಿಸಿದೆ. ಇದು ಪುಟ್ಟ ಚೆಂದದ ಶ್ಯಾವಿಗೆ ಮಣೆ. ಮರದ ಶ್ಯಾವಿಗೆ ಮಣೆಯ ಅಡಿಭಾಗದಲ್ಲಿ ಸ್ಟೇನ್ ಲೆಸ್ ಸ್ಟೀಲ್ನ ಜರಡಿ ಅಳವಡಿಸಲಾಗಿದೆ. ಅತ್ಯಂತ ಸರಳವಾಗಿರುವ ಹಾಗೂ ಒಬ್ಬನೇ ನಿರ್ವಹಿಸುವ ಸಾಮಥ್ರ್ಯ ಹೊಂದಿದ ಈ ಮಣೆಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಕೊಯಂಬತ್ತೂರ್ನಲ್ಲಿ ಆವಿಷ್ಕಾರಗೊಂಡ ಈ ಮಣೆ ಇದೀಗ ಮಂಗಳೂರಿನ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದೆ. 1500ರುಪಾಯಿ ಮೌಲ್ಯದ ಈ ಮಣೆ ಎಲ್ಲಿಬೇಕಾದರೂ ಕೊಂಡೊಯ್ಯಬಲ್ಲದು. ಹೆಚ್ಚು ಜಾಗದ ಅವಶ್ಯಕತೆಯೂ ಇಲ್ಲದೆ ಪುಟ್ಟ ಅಡುಗೆ ಮನೆಯಲ್ಲಿ ಜಾಗ ಕಲ್ಪಿಸಿಕೊಂಡಿದೆ!