Headlines

ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… * 28ನೇ ವಾರದ ಸ್ವಚ್ಛತಾ ಅಭಿಯಾನ * ಈ ಕರ್ಮಕಾಂಡಕ್ಕೆ ಯಾರು ಬಲಿ…? * `ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’ * 27ನೇ ವಾರದ ಕ್ಲೀನ್ ಅಪ್ ಮೂಡಬಿದಿರೆ ಸಂಪನ್ನ * ನಮ್ಮ ಹೆಮ್ಮಕ್ಕಳು ಅದೆಷ್ಟು ಸುರಕ್ಷಿತ…? * ಮನಮೋಹಕ ನೃತ್ಯ ಸಿಂಚನ * ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 * ಆಧುನಿಕತೆಯೇ ಮುಳುವಾಯಿತೇ…? * ನಾಟ್ಯ ಮಯೂರಿ… * ನವೆಂಬರ್ 16-18: ಆಳ್ವಾಸ್ ನುಡಿಸಿರಿ *

ಆಳ್ವಾಸ್ ನುಡಿಸಿರಿ ಸರ್ವಾಧ್ಯಕ್ಷರಾಗಿ ನಾಗತೀಹಳ್ಳಿ: ಉದ್ಘಾಟನೆಗೆ ಸಿ.ಎನ್.ರಾಮಚಂದ್ರನ್

#nagatthihalli#chandrashekar

ವಾರ್ತೆ ವರದಿ-ಮೂಡಬಿದಿರೆ
ಹದಿನಾಲ್ಕನೇ ವರ್ಷದ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ `ಆಳ್ವಾಸ್ ನುಡಿಸಿರಿ-2017ರ ಸವರ್ಾಧ್ಯಕ್ಷರಾಗಿ ಹಿರಿಯ ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಉದ್ಘಾಟಕರಾಗಿ ಡಾ.ಸಿ.ಎನ್.ರಾಮಚಂದ್ರನ್ ಆಯ್ಕೆಗೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಕರ್ನಾಟಕ: ಬಹುತ್ವದ ನೆಲೆಗಳು ಎನ್ನುವ ಪ್ರಧಾನ ಪರಿಕಲ್ಪನೆಯಡಿ ದಶಂಬರ್ 1,2 ಮತ್ತು 3ರಂದು ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಸಿದ್ಧತೆಗಳು ಭರದಿಂದ ಸಾಗುತ್ತಿದ್ದು ಕನ್ನಡ ನಾಡು ನುಡಿ ಭಾಷೆಯ ಕುರಿತಾದ ಎಚ್ಚರ, ಕನ್ನಡ ಸಂಸ್ಕೃತಿಯ ಕುರಿತಾದ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಈ ಸಮ್ಮೇಳನವು ಕನ್ನಡದ ಒಳಿತಿಗಾಗಿ ದುಡಿಸಬೇಕಾದ ಎಲ್ಲಾ ಆಯಾಮಗಳನ್ನು ದುಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಈ ಹಿನ್ನಲೆಯಿಂದಾಗಿಯೇ ಇದೊಂದು ಕೇವಲ ಸಾಹಿತ್ಯ ಸಮ್ಮೇಳನವಾಗಿರದೆ ಕನ್ನಡದ ವಿರಾಟ್ ಸ್ವರೂಪದ ಅಭಿವ್ಯಕ್ತಿಯಾಗಿ ಜನಮನ ಸೆಳೆಯುತ್ತಿದೆ ಎಂದರು.
ಡಾ.ನಾಗತೀಹಳ್ಳಿ ಚಂದ್ರಶೇಖರ್
ಮಂಡ್ಯ ಜಿಲ್ಲೆಯ ನಾಗತೀಹಳ್ಳಿಯವರಾದ ಚಂದ್ರಶೇಖರ್ ಅವರು ನಾಗತೀಹಳ್ಳಿ ಚಂದ್ರಶೇಖರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಕನ್ನಡಸ ್ನಾತಕೋತ್ತರ ಪದವಿಯನ್ನು ಸ್ವರ್ಣ ಪದಕದೊಂದಿಗೆ ಪೂರೈಸಿದ ನಾಗತೀಹಳ್ಳಿಯವರು ಕನ್ನಡ ಪ್ರಾಧ್ಯಾಪಕರು. ತಮ್ಮ ಗ್ರಾಮದ ಒಳಿತಿಗಾಗಿ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಿ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ತರಬೇತಿ ಕೇಂದ್ರ, ಯುಗಾದಿ ಸಮಯದಲ್ಲಿ ನಡೆಸುವ ನಾಗತೀಹಳ್ಳಿ ಸಂಸ್ಕೃತಿ ಹಬ್ಬದ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಸಫಲರಾದವರು. ಗ್ರಾಮೀಣ ಜನರ ಆರ್ಥಿಕ ಸಮಸ್ಯೆಗೂ ಸ್ಪಂದನೆ ನೀಡುತ್ತಿರುವ ನಾಗತೀಹಳ್ಳಿಯವರು ಸರಳ ಸಜ್ಜನ ವ್ಯಕ್ತಿ.
ಬಹುಮುಖ ವ್ಯಕ್ತಿತ್ವದ ನಾಗತೀಹಳ್ಳಿಯವರು ಕಥನಕಾರರಾಗಿಯೂ ಗುರುತಿಸಿಕೊಂಡವರು. ಎಂಟನೆಯ ತರಗತಿಯಲ್ಲಿ ಆವರ್ತ ಎನ್ನುವ ಕಥೆ ಬರೆದ ಇವರು ಕಥೆ, ಕಾದಂಬರಿ, ಪ್ರವಾಸಕಥನಗಳನ್ನೊಳಗೊಂಡಂತೆ 21ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಪ್ರೀತಿಯ ಹುಡುಗಿಗೆ, ಹಲವು ಸಂಪುಟಗಳಲ್ಲಿ ಮೂಡಿಬಂದ ಅವರ ಆತ್ಮಕಥೆ. ಶತಮಾನದಂಚಿನಲ್ಲಿ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟ.
ಕಾಡಿನ ಬೆಂಕಿ ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತರಚನೆಗಳಲ್ಲಿ ಭಾಗಿಯಾದವರು. ಉಂಡುಹೋದ ಕೊಂಡೂಹೋದ ಸಿನೆಮಾದ ಮೂಲಕ ನಿರ್ದೇಶಕ ಪಟ್ಟಕ್ಕೇರಿದರು. ಈತನಕ 15ಕ್ಕಿಂತಲೂ ಹೆಚ್ಚು ಚಿತ್ರ ನಿರ್ದೇಶಿಸಿ ಯಶ ಕಂಡವರು. ಹಲವು ರಾಜ್ಯ,ರಾಷ್ಟ್ರ ಪ್ರಶಸ್ತಿಗಳು ಇವರನ್ನರಸಿಕೊಂಡು ಬಂದಿವೆ. ಇವರ ನಿರ್ದೇಶನದ ಹಲವು ಧಾರಾವಾಹಿಗಳು ರಾಜ್ಯದ ಮನೆ ಮನ ತಲುಪಿದೆ.
ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥಾಲೇಖನ, ಅತ್ಯುತ್ತಮ ಗೀತರಚನೆಗಾರ, ಅತ್ಯುತ್ತಮ ನಿರ್ದೇಶಕ ಇವೇ ಮೊದಲಾದ ಹಲವು ಪ್ರಶಸ್ತಿಗಳು ಚಿತ್ರರಂಗದಲ್ಲಿ ಲಭಿಸಿವೆ.
ಡಾ.ಸಿ.ಎನ್.ರಾಮಚಂದ್ರನ್
ಇಂಗ್ಲಿಷ್ ಭಾಷೆಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಹಾಗೂ ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ ಪದವಿಯನ್ನು ಪಡೆದವರು ಡಾ.ಸಿ.ಎನ್.ರಾಮಚಂದ್ರನ್. ಭಾರತ, ಸೊಮಾಲಿಯಾ ,ಸೌದಿ ಅರೇಬಿಯಾ, ಮತ್ತು ಅಮೇರಿಕಾಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕರಾಗಿ ಹೆಸರುವಾಸಿಯಾದ ಇವರು ಮಂಗಳೂರು ವಿ.ವಿ.ಯಲ್ಲಿ 16ವರ್ಷಗಳ ಕಾಲ ಪ್ರಾಧ್ಯಾಪಕರಾಗಿ , ವಿಭಾಗ ಮುಖ್ಯಸ್ಥರಾಗಿ ಕರ್ತವ್ಯನಿರ್ವಹಿಸಿದ್ದಾರೆ.

ದೆಹಲಿ, ಸ್ಯಾನ್ ಪ್ರಾನ್ಸಿಸ್ಕೋ, ಟೋಕಿಯೋ,  ಕಾಲ್ಫ್ ಮೊದಲಾದ ದೇಶ ವಿದೇಶಗಳಲ್ಲಿ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಖ್ಯಾತ ವಿಮರ್ಶಕರಾಗಿ ಗುರುತಿಸಿಕೊಂಡವರು. ಇಂಗ್ಲಿಷ್ ನಲ್ಲಿ 10, ಕನ್ನಡದಲ್ಲಿ 16, ಕೃತಿ ರಚಿಸಿದ್ದಾರೆ. ಸಾಹಿತ್ಯ ವಿಮರ್ಶೆ, ತೌಲನಿಕ ಸಾಹಿತ್ಯ, ಹೊಸಮಡಿಯ ಮೇಲೆ ಚದುರಂಗ ಮೊದಲಾದ ಕೃತಿಗಳ ಮೂಲಕ ಗುರುತಿಸಲ್ಪಟ್ಟವರು. ಕನ್ನಡದಿಂದ ಅನೇಕ ಕೃತಿಗಳನ್ನು ಇಂಗ್ಲಿಷ್ಗೆ ಇವರು ಅನುವಾದಿಸಿದ್ದಾರೆ. ಮಲೆಮಾದೇಶ್ವರ ಜನಪದ ಮಹಾಕಾವ್ಯದ ಅನುವಾದವು ಅತೀ ಮಹತ್ವಾಕಾಂಕ್ಷೀ ಅನುವಾದವೆಂಬ ಪ್ರಸಿದ್ಧಿಗೆ ಪಾತ್ರವಾಗಿದೆ. ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಥಾ ಪ್ರಶಸ್ತಿ, ಕೆ.ಕೆ.ಬಿರ್ಲಾ ಫೆಲೋಶಿಪ್ ಮೊದಲಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.