Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಆಳ್ವಾಸ್ ಚಿತ್ರಕಲಾ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ

#nudisiri#2017

ನಮ್ಮ ಪ್ರತಿನಿಧಿ ವರದಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಚಿತ್ರಕಲೆಯಕುರಿತುಜನಜಾಗೃತಿಗಾಗಿಒಂದು ಬೃಹತ್ಹಾಗೂ ವ್ಯವಸ್ಥಿತ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಸುವರ್ಣಅವಕಾಶವನ್ನುಕಲ್ಪಿಸಲಾಗಿದೆ.ನವಂಬರ್31 ರಿಂದಡಿಸೆಂಬರ್ 3ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗಳದಲ್ಲಿ ಏರ್ಪಡಿಸಲಾಗಿರುವ ಈ ಚಿತ್ರಕಲಾ ಮೇಳವುನಾಡು ನುಡಿಯ ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಳ್ಳುವ ಸಾವಿರಾರು ಕಲಾರಸಿಕರಿಗೆ ರಸದೌತಣ ನೀಡಲಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರುತಮ್ಮ ಕಲಾಕೃತಿಗಳ ಪ್ರದರ್ಶನದಜೊತೆಗೆ ಸ್ಥಳದಲ್ಲೇ ಮಾರಾಟವನ್ನೂ ಮಾಡಬಹುದು. ಕಲಾ ಶಾಲೆಗಳ ವಿದ್ಯಾರ್ಥಿಗಳೂ ತಮ್ಮ ಶಾಲಾ ಮುಖ್ಯಸ್ಥರಅನುಮತಿ ಪತ್ರದೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.ಒಬ್ಬರಿಗೆಒಂದು ಮಳಿಗೆಯನ್ನು ಮಾತ್ರ ಪಡೆಯಲುಅವಕಾಶವಿದ್ದು, ಕಲಾಕೃತಿಗಳ ಪ್ರದರ್ಶನಕ್ಕಾಗಿ 7 ಅಡಿ ಎತ್ತರ ಹಾಗೂ 10 ಅಡಿ ಅಗಲ ವಿಸ್ತಾರದ ಸಮತಳ ಮಳಿಗೆಗಳನ್ನು ನೀಡಲಾಗುವುದು.ಉಳಿದಂತೆ ಪ್ರದರ್ಶನಕ್ಕೆ ಬೇಕಾದಅಗತ್ಯ ವಸ್ತುಗಳನ್ನು ಚಿತ್ರಕಲಾವಿದರೇತರಬೇಕಾಗುತ್ತದೆ.ಡಿಸೆಂಬರ್1ರ ಬೆಳಿಗ್ಗೆ 9ಗಂಟೆಯೊಳಗೆ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಸಂಪೂರ್ಣಗೊಳಿಸಿರಬೇಕು.
ಕಲಾವಿದರುತಮ್ಮ ಮಳಿಗೆಗಳಲ್ಲಿ ಚಿತ್ರಕಲೆಯಕುರಿತುಪ್ರಾತ್ಯಕ್ಷಿಕೆ ನೀಡಬಹುದು.ಭಾಗವಹಿಸುವ ಪ್ರತೀಚಿತ್ರಕಲಾವಿದರಿಗೂಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.ಇದರಜೊತೆಗೆಕಲಾವಿದರಿಗೆಅಭಿನಂದನಾ ಪತ್ರವನ್ನೂನೀಡಲಾಗುವುದು.ಆಸಕ್ತರು ನವಂಬರ್ 25ರೊಳಗೆwww.alvasnudisiri.com ಜಾಲತಾಣದಲ್ಲಿಆನ್ಲೈನ್ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಿದ ಕಲಾವಿದರಿಗೆ ಮಳಿಗೆ ಸಂಖ್ಯೆ ನೀಡಲಾಗುವುದು.