Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಆಧುನಿಕತೆಯೇ ಮುಳುವಾಯಿತೇ…?

Mixed race woman holding out cupped hands

ಸ್ಟೂಡೆಂಟ್ ರಿಪೋರ್ಟರ್: ಆರೋಗ್ಯ

ಹೌದು..! ಮಾನವನ ಆರೋಗ್ಯ ಮಟ್ಟ ಕ್ಷೀಣಿಸುತ್ತಿದೆ.  ಅಪಾರ ಪ್ರಮಾಣದ ಆಧುನಿಕ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದೇ ಮುಳುವಾಯ್ತೇ…? ಮನುಷ್ಯನಿಗೆ ಆಲಸ್ಯ ಹೆಚ್ಚಾಗಿದೆ. ಶ್ರಮ ವಹಿಸುವ ಕಾರ್ಯ ಇಲ್ಲವಾಗಿವೆ.  ಇದರಿಂದ ಮೈ ಬಗ್ಗಿಸಿ ದುಡಿಯುವ ಪ್ರಮಾಣ ಕ್ಷೀಣವಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪ್ರತಿಕೋಲ ಪರಿಣಾಮವನ್ನು ಬೀರತೊಡಗಿವೆ.  ನಮ್ಮ ಪೂರ್ವಜರು ಪರಿಶ್ರಮದಿಂದ ದುಡಿದು, ಪೌಷ್ಟಿಕಯುಕ್ತ ಆಹಾರಗಳಾದ ರಾಗಿ ಮುದ್ದೆ, ರಾಗಿ ಅಂಬಲಿಯನ್ನು ಸೇವಿಸಿ ಆರೋಗ್ಯವಂತರಾಗಿದ್ದರೆಂಬುದನ್ನು ನಾವು ಮರೆಯಬಾರದು.
ನಮ್ಮ ಹಿರಿಯರು ಉತ್ತಮ ಶ್ರಮಿಕರಾಗಿದ್ದು, ಇಂದಿನ ಯಂತ್ರಗಳು ಮಾಡುವ ಎಲ್ಲ ಕೆಲಸವನ್ನು ಅವರೇ ಸ್ವತಃ ಮೈ ಬಗ್ಗಿಸಿ ಮಾಡುತ್ತಿದ್ದರು.  ನೀರು  ಸೇದುವುದು , ಅಡುಗೆ ಕೆಲಸ, ಕೃಷಿ ಕೆಲಸಗಳು, ನಾಟಿ ಮಾಡುವುದು, ಬೆಳೆ ಬೆಳೆಯುವುದು, ಅಡಿಕೆ ಕೊಯ್ಲು ಹೀಗೆ ಹಲವು ಕಾರ್ಯಗಳನ್ನು ಸ್ವತಃ ಮಾಡುತ್ತಿದ್ದರು.  ಆದರೆ ಇಂದು ಅವೆಲ್ಲವುಗಳಿಗೂ ಯಂತ್ರಗಳನ್ನು ಅವಲಂಬಿಸುವ ಸ್ಥಿತಿ ಬಂದಿದೆ. ತತ್ ಪರಿಣಾಮ  ಆಧುನಿಕ ಯುಗದಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಇಂದೋ ನಾಳೆಯೋ ಎಂಬ ಜೀವಭಯ ಕಾಡುತ್ತಿದೆ.

ಹತ್ತು ಹೆಜ್ಜೆ ನಡೆಯಲೂ ಹಿಂಜರಿಯುವ ಪರಿಸ್ಥಿತಿ ಪ್ರಸಕ್ತ ಕಾಲಘಟ್ಟದಲ್ಲಿದೆ. ಯಂತ್ರಗಳಿಗೆ ಕೆಲಸ ಕೊಟ್ಟು, ಮಾನವ ಮೂಕ ಪ್ರೇಕ್ಷಕನಾಗಿ ನಿಂತಿದ್ದಾನೆ.  ಟಿವಿ ಮೊಬೈಲ್ಗಳೇ ಆಧಾರವಾಗಿದೆ. ಎಸಿ ಕೂಲರ್ಗಳು, ಕಲಬೆರಕೆ ಆಹಾರಗಳಿಗೆ ಮೊರೆಹೋಗುವಂತಾಗಿದೆ.  ದೇಹಕ್ಕೆ ಪ್ರಮುಖವಾಗಿ ವ್ಯಯಾಮವಿಲ್ಲ, ಆಹಾರದ ಕೊರತೆಯಿಂದ ನಿಶ್ಯಕ್ತರಾಗಿದ್ದು ಬೇಗನೇ ಯಮಲೋಕಕ್ಕೆ ಲಗ್ಗೆ ಇಡುತ್ತಾರೆ. ನಮ್ಮ ಆರೋಗ್ಯ  ನಮ್ಮ ಕೈಯಲ್ಲಿದೆ. ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿ.

ಜಯಾನಂದ
ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ