Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ

#eye camp
 361 ಮಂದಿ ಭಾಗಿ ; ನೇತ್ರದಾನಕ್ಕೆ ಮುಂದಾದ 11 ಮಂದಿ
 
ಮೂಡುಬಿದಿರೆ: ದಕ್ಷಿಣ ಕನ್ನಡ ಕಣ್ಣಿ ವೈದ್ಯರ ಸಂಘದ ಅಧ್ಯಕ್ಷ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ ಡಾ. ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ಅಶ್ವತ್ಥಪುರದ ಸಂತೆಕಟ್ಟೆಯಲ್ಲಿರುವ ವಿವಿದೋದ್ದೇಶ ಸಭಾಂಗಣದಲ್ಲಿ ಭಾನುವಾರ ನಡೆದ ಕಣ್ಣಿನ ತಪಾಸಣೆ, ಚಿಕಿತ್ಸೆ, ಔಷಧಿ, ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಒಟ್ಟು 361 ಮಂದಿ ಭಾಗವಹಿಸಿದರು. ಶಿಬಿರದಿಂದಾಗಿ ಗ್ರಾಮೀಣ ಪ್ರದೇಶದಲ್ಲೂ ನೇತ್ರದಾನ ಜಾಗೃತಿ ಮೂಡಿದ್ದು ಒಟ್ಟು 11 ಮಂದಿ ನೇತ್ರದಾನಕ್ಕೆ ಮುಂದಾಗಿದ್ದಾರೆ.
 
ಜಿಪಂ ಸದಸ್ಯ ಜನಾರ್ದನ ಗೌಡ ಶಿಬಿರಕ್ಕೆ ಚಾಲನೆ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ರಕ್ಷಣೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಉತ್ತಮ ಕೆಲಸ. ಡಾ. ಸುಧೀರ್ ಹೆಗ್ಡೆ ಅವರ ಸಾಮಾಜಿಕ ಕಾಳಜಿಯ ಚಿಂತನೆಗಳಿಗೆ ಪೂರಕವಾಗಿ ಅವರೊಂದಿಗಿರುವ ಯುವಕರ ತಂಡ ಶ್ರಮಿಸುತ್ತಿರುವುದು ಶ್ಲಾಘನೀಯ. ಗ್ರಾಮಸ್ಥರು ಇಂತಹ ಕೆಲಸಕ್ಕೆ ಬೆಂಬಲ ನೀಡಬೇಕು ಎಂದರು.
 
ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಆಧುನಿಕ ಸಮಾಜದ ನಿರ್ಮಾಣ ಗ್ರಾಮೀಣ ಪ್ರದೇಶದಲ್ಲಿ ಆಗಬೇಕು. ಆರ್ಥಿಕವಾಗಿ ತೆರೆದುಕೊಳ್ಳುತ್ತಿರುವ ಅಶ್ವತ್ಥಪುರದಂತಹ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಕಾಳಜಿ ಹೆಚ್ಚಬೇಕು ಎಂದರು.
 
ತೆಂಕಮಿಜಾರು ಗ್ರಾಮ ಪಂಚಾಯಿತಿ ಸದಸ್ಯರಾದ ಕರುಣಾಕರ ಶೆಟ್ಟಿ, ರುಕ್ಮಯ್ಯ ಗೌಡ ಮುಖ್ಯ ಅತಿಥಿಯಾಗಿದ್ದರು. ತೆಂಕಮಿಜಾರು ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಉದ್ಯಮಿ ರಾಘವೇಂದ್ರ ಸಹಿತ ಗಣ್ಯರು ಭಾಗವಹಿಸಿದರು. ಕಣ್ಣಿನ ತಜ್ಞರಾದ ಡಾ.ಸುಧೀರ್ ಹೆಗ್ಡೆ, ಡಾ. ಆಕಾಂಕ್ಷ ಶೆಟ್ಟಿ ಸಹಿತ ಸಿಬ್ಬಂದಿಗಳು ನೇತ್ರ ಚಿಕಿತ್ಸೆಯನ್ನು ನೆರವೇರಿಸಿಕೊಟ್ಟರು. ಶುಭಕರ ರಾವ್ ಕಾರ್ಯಕ್ರಮ ನಿರೂಪಿಸಿದರು.
 
ನೇತ್ರದಾನಿಗಳು
 
ಸಮಾಜಸೇವಕ ಬಿ. ಎಲ್. ದಿನೇಶ್ ಕುಮಾರ್ ತಾನು ನೇತ್ರದಾನಕ್ಕೆ ಮಾಡುವುದಾಗಿ ಘೋಷಣೆ ಮಾಡುವುದರ ಮೂಲಕ ನೇತ್ರದಾನ ನೋಂದಣಿಗೆ ಚಾಲನೆ ನೀಡಿದರು. ರುಕ್ಕಯ್ಯ ದೇವಾಡಿಗ, ಪ್ರಮೀಳಾ ದೇವಾಡಿಗ, ಮಹಾಬಲ ನಾಯ್ಕ್, ಸುಜಯ ನಾಯ್ಕ್, ಪ್ರೇಮಾ ಶೆಟ್ಟಿ, ಜಗನ್ನಾಥ್ ಚೌಟ, ಸುಂದರಿ, ಪ್ರವೀಣ, ತಾರನಾಥ, ರಾಮಚಂದ್ರ ಅವರು ನೇತ್ರದಾನ ನೋಂದಣಿಯನ್ನು ಮಾಡಿಸಿಕೊಂಡರು.
 
ಶಿಬಿರದಲ್ಲಿ ತಪಾಸಣೆಗೊಂಡ 55 ಮಂದಿಗೆ ಶಸ್ತ್ರಚಿಕಿತ್ಸೆ ಹಾಗೂ 166 ಮಂದಿಗೆ ಉಚಿತ ಕನ್ನಡಕದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ.
ನೇತ್ರದಾನ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರದಲ್ಲೂ ಇರುವ ತಪ್ಪು ಕಲ್ಪನೆಗಳಿಂದಾಗಿ ಹೆಚ್ಚಿನ ಜನರು ನೋಂದವಣೆ ಮಾಡಿಸಿಕೊಳ್ಳುವುದಿಲ್ಲ. ಆದರೆ ಅಶ್ವತ್ಥಪುರದಲ್ಲಿ ನಡೆದ ನೇತ್ರ ಚಿಕಿತ್ಸೆ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ನೇತ್ರದಾನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ.
 
– ಡಾ. ಸುಧೀರ್ ಹೆಗ್ಡೆ
 ಖ್ಯಾತ ಕಣ್ಣಿನ ವೈದ್ಯ