Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.!

#aliyur#statelevel#ballbadmiton
ಶಿಕ್ಷಣ ಕಾಶಿಯಲ್ಲಿ ನಡೆಯಲಿದೆ ಕ್ರೀಡಾ ಕ್ರಾಂತಿ.! ಸಾಧನೆಯ ಮೆಟ್ಟಿಲಲ್ಲಿ ಸರಕಾರಿ ಪ್ರೌಢಶಾಲೆ…
-ಸುನಿಲ್ ಪಣಪಿಲ
ದುಂಬಿಗಳ ನಾಡು ಎಂದೇ ಖ್ಯಾತಿ ಪಡೆದಿರುವ “ಭ್ರಮರ”ಪುರ (ಅಳಿಯೂರು)ದಲ್ಲಿ ಈ ಬಾರಿ ಕ್ರೀಡಾಲೋಕ ಅನಾವರಣಗೊಳ್ಳಲಿದೆ. ಸರಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿನ ಸಾಧನೆಗಳ ಸಾಲಿಗೆ ಮತ್ತೊಂದು ಗರಿಮೆ ಈ ಬಾರಿ ನಡೆಯಲಿರುವ ಕ್ರೀಡೋತ್ಸವ. ಸರಕಾರಿ ಶಾಲೆಯೊಂದು ಹೇಗಿರಬೇಕೆಂದರೆ ಅದು ಅಳಿಯೂರು ಪ್ರೌಢಶಾಲೆಯಂತಿರಬೇಕೆಂದು ರಾಜ್ಯಕ್ಕೇ ಸಾರಿರುವ ಹೆಮ್ಮೆಯ ಶಾಲೆ ಸರಕಾರಿ ಪ್ರೌಢಶಾಲೆ ಅಳಿಯೂರು. ಅಂದಹಾಗೆ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳನ್ನು ಸರಕಾರಿ ಶಾಲೆಗಳಿಗೆ ಜವಬ್ಧಾರಿ ನೀಡೋದು ತೀರಾ ಅಪರೂಪ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅತಿ ಸಣ್ಣ ಗ್ರಾಮದಲ್ಲಿ ತಲೆ ಎತ್ತಿ ನಿಂತು ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೇ ತನ್ನ ಸಾಧನಾ ಲೋಕವನ್ನೇ ತೋರಿಸಿದ ಸರಕಾರಿ ಪ್ರೌಢಶಾಲೆ ಅಳಿಯೂರಿಗೆ ಈ ಬಾರಿಯ ರಾಜ್ಯಮಟ್ಟದ ಸ್ಪರ್ಧೆಯ ಅವಕಾಶ ನೀಡಿರೋದು ನಿಜವಾಗಿಯೂ ನಮ್ಮ ಶಾಲೆಯ ಹಿರಿಮೆ, ಗರಿಮೆ ಹಾಗೂ ಶಾಲಾ ಶಿಕ್ಷಕರ ಮಹಿಮೆಯನ್ನು ಬಣ್ಣಿಸುತ್ತದೆ.
ದಿನಾಂಕ 02.11.2018 ಹಾಗೂ 03.11.2018ರಂದು ಸರಕಾರಿ ಪ್ರೌಢಶಾಲೆ ಅಳಿಯೂರಿನಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ. ರಾಜ್ಯದ ವಿವಿದೆಡೆ ನಡೆದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳು ನಮ್ಮ ಶಾಲೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಹಲವಾರು ವರ್ಷಗಳಿಂದ ಅಳಿಯೂರು ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ವಸಂತ ಜೋಗಿಯವರ ಕಾರ್ಯ ಕ್ಷಮತೆ ಹಾಗೂ ಶಾಲೆಯ ಮೇಲಿಟ್ಟಿರುವ ಪ್ರೀತಿ ಈ ಶಾಲೆಗೆ ಇಂತಹಾ ಸೌಭಾಗ್ಯ ಒದಗಿ ಬರಲು ಕಾರಣವಾಗಿದೆ. ಅಂತರ್ ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ವಿಜೇತರೂ ಆಗಿರುವ ವಸಂತ ಜೋಗಿಯವರು ಈಗ ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ತರಬೇತುದಾರರಾಗಿದ್ದಾರೆ ಅನ್ನೋದು ಕೂಡಾ ಈ ಶಾಲೆಗೆ ಒಲಿದು ಬಂದ ಗೌರವ. ರಾಜ್ಯ ಮಟ್ಟದ ಸ್ಪರ್ಧೆಯನ್ನು ವಹಿಸಿಕೊಳ್ಳಬೇಕಾದರೆ ಅದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಆರ್ಥಿಕ ಸ್ಥಿತಿಗತಿ.
5 ಲಕ್ಷಕ್ಕೂ ಅಧಿಕ ಖರ್ಚಿನಲ್ಲಿ ನಡೆಸುವ ಈ ರಾಜ್ಯಮಟ್ಟದ ಸ್ಪರ್ಧೆಯನ್ನು ವಹಿಸಿಕೊಳ್ಳಲು ಯಾರೂ ತಯಾರಾಗಿರುವುದಿಲ್ಲ. ಅದರಲ್ಲೂ ಸರ್ಕಾರಿ ಶಾಲೆಗಳಂತೂ ಒಪ್ಪಿಕೊಳ್ಳೋದು ತುಂಬಾನೆ ವಿರಳ. ಆದರೆ ಗ್ರಾಮದ ಉದಾರಿಗಳ ಮೇಲಿರುವ ವಿಶ್ವಾಸ ಹಾಗೂ ಶಾಲೆಯ ಮೇಲಿಟ್ಟಿರುವ ಪ್ರೀತಿಯಿಂದ ಮತ್ತು ಶಾಲೆಗೆ 20 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಏನಾದರೂ ಪ್ರಮುಖ ಕಾರ್ಯಕ್ರಮವನ್ನು ನಡೆಸಬೇಕೆನ್ನುವ ಉದ್ಧೇಶದಿಂದ ಈ ಸ್ಪರ್ಧೆಯನ್ನು ನಮ್ಮ ಶಾಲೆಯಲ್ಲಿ ನಡೆಸಲು ಒಪ್ಪಿಕೊಂಡಿದ್ದಾರೆ. ವಸಂತ್ ಜೋಗಿಯವರ ಈ ನಿರ್ಧಾರ ಸ್ವತಃ ಶಿಕ್ಷಣ ಇಲಾಖೆಯವರೂ ಬಿಟ್ಟ ಕಣ್ಣು ಬಿಟ್ಟಂಗೆ ನೋಡುವಂತಾದರೂ ಶಾಲೆಯ ಸಾಧನೆಯನ್ನು ಗಮನಿಸಿ ಜೈ ಅಂದುಬಿಟ್ಟಿದ್ದರು. ನಂತರ ಇದರ ಜವಬ್ಧಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿರುವ ವಸಂತ ಜೋಗಿಯವರು ಶಾಲಾಭಿವೃದ್ಧಿ ಸಮಿತಿ, ಶಾಲಾ ಮುಖ್ಯೋಪಾದ್ಯರು ಹಾಗೂ ಸಹಶಿಕ್ಷಕರನ್ನು ಒಟ್ಟುಗೂಡಿಸಿ ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರ ಹಾಗೂ ದಾನಿಗಳ ಸಭೆ ಕರೆದು ಸಹಾಯ ಕೋರಿ ಕಾರ್ಯಕ್ರಮಕ್ಕೆ ಅಡಿಗಲ್ಲು ಹಾಕಿಬಿಟ್ಟಿದ್ದರು.
ಶಾಲೆಯ ಕನಸು ಇಂದು ನನಸಾಗಲು ಕ್ಷಣಗಣನೆ ಆರಂಭವಾಗುತ್ತಿದೆ. ಬಹುನಿರೀಕ್ಷಿತ ಅಳಿಯೂರಿನ ಕ್ರೀಡಾ ಹಬ್ಬ  ನಾಳೆಯಿಂದ ಅಳಿಯೂರಿನಲ್ಲಿ ನಡೆಯಲಿದೆ. ಮೂಲ್ಕಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ  ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ಯುಟಿ ಖಾದರ್, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ  ನಳಿನ್ ಕುಮಾರ್ ಕಟೀಲು ಸೇರಿದಂತೆ ಕರಾವಳಿಯ ಎಲ್ಲಾ ಶಾಸಕರು ಹಾಗೂ ಜಿಲ್ಲಾ ಪಂಚಾಯತಿಯ ಸಹಿತ ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಈ ಕ್ರೀಡಾ ಹಬ್ಬ ಶನಿವಾರ ಸಂಜೆ ಸಮಾರೋಪದ ಮೂಲಕ ಮುಕ್ತಾಯವಾಗಲಿದೆ. ಈ ಮಧ್ಯೆ ಕ್ರೀಡಾ ಹಬ್ಬದಲ್ಲಿ ಸಾಂಸ್ಕೃತಿಕ ಲೋಕವೂ ಅನಾವರಣಗೊಳ್ಳಲಿದೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, ಮೂಡುಬಿದಿರೆ ಸಹ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಮಹದೇವ ಮೂಡುಕೊಣಾಜೆ ಇವರ ನೇತೃತ್ವದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಕರಾವಳಿಯಲ್ಲೇ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಯೊಂದಿಗೆ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನೂ ಹೊಂದಿರುವ ಶಾಲೆ ಎಂಬ ಹಿರಿಮೆಗೂ ಪಾತ್ರವಾಗಿರುವ ಈ ಶಾಲೆ 20ವರ್ಷಗಳನ್ನು ಪೂರೈಸಿದೆ.  ಸಾಂಸ್ಕೃತಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸಹಿತ ಎಲ್ಲಾ ರಂಗದಲ್ಲೂ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ಬಾಚಿರುವ ಶಾಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಸರ್ಕಾರವನ್ನು ಕಂಗೆಟ್ಟುವಂತೆ ಮಾಡಿರುವಾಗ ನಮ್ಮೂರ ಶಾಲೆ ಖಾಸಗೀ ಶಿಕ್ಷಣ ಸಂಸ್ಥೆಗಳೇ ನಾಚುವಂತೆ ಬೆಳೆದು ನಿಂತು ಸರ್ಕಾರವೇ ಮೆಚ್ಚುವಂತಹ ರೀತಿಯಲ್ಲಿ ಶಾಲೆಯನ್ನು ನಡೆಸುತ್ತಿದೆ. ಶಾಲೆಯ ಈ ಸಾಧನೆಗೆ ಈಗ ಮತ್ತೊಂದು ಸಾಧನೆ ಸೇರ್ಪಡೆಯಾಗಲಿದ್ದು ಈ ಸಾಧನೆಯ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ.
ಆಗಬೇಕಿದೆ ಕಾಲೇಜು-ಬದಲಾಗಲಿದೆ ಇಮೇಜು..!
   ಕಳೆದ ಹತ್ತಾರು ವರ್ಷಗಳಿಂದ ಈ ಭಾಗದ ಜನತೆಯ ಒಂದೇ ಕೂಗು, ನಮ್ಮ ಅಳಿಯೂರಿಗೆ ಸರ್ಕಾರಿ ಕಾಲೇಜನ್ನು ಕರುಣಿಸಿ ಕೊಡಿ ಎಂದು. ವಿಜ್ಞಾನ, ಕನ್ನಡ, ಇಂಗ್ಲಿಷ್, ಕ್ರೀಡೆ ಹಾಗೂ  ಸಾಂಸ್ಕೃತಿಕ ಹೀಗೆ ಎಲ್ಲಾ ರಂಗದಲ್ಲೂ ಶಿಖರದ ಉತ್ತುಂಗಕ್ಕೆ ಮುತ್ತಿಡುವಂತಹಾ ಸಾಧನೆ ಮಾಡಿರುವ ಅಳಿಯೂರು ಶಾಲೆ ಕಾಲೇಜನ್ನು ನಡೆಸುವ ಎಲ್ಲಾ ಅರ್ಹತೆಯನ್ನೂ ಹೊಂದಿದೆ. ಈಗಾಗಲೇ ಈ ಪ್ರೌಢಶಾಲೆಗೆ ದೂರದ ನಾಲ್ಕು ದಿಕ್ಕುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಕಾಲೇಜು ನಿರ್ಮಾಣವಾದರೆ ಈ ಭಾಗಕ್ಕೆ ಮಾತ್ರವಲ್ಲದೆ ಮೂಡುಬಿದಿರೆ ವಲಯದ ಬಡ ವಿದ್ಯಾರ್ಥಿಗಳಿಗೆ ಭಾರೀ ಕೊಡುಗೆ ನೀಡಿದಂತಾಗಿದೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದೂ ಈ ಭಾಗದ ಜನತೆಯ ಆಗ್ರಹವೂ ಆಗಿದೆ. ಶಾಲೆಯ 20ನೇ ವರ್ಷದ ಸಂಭ್ರಮದಲ್ಲಿ ಈ ಮಹತ್ತರ ಕೊಡುಗೆ ಸರ್ಕಾರ ನೀಡಬಹುದು ಎಂಬ ನಿರೀಕ್ಷೆಯನ್ನೂ ಜನರು ಇಟ್ಟುಕೊಂಡಿದ್ದಾರೆ.
ಬನ್ನಿ, ಭಾಗವಹಿಸಿ… ಶಿಕ್ಷಣ ಕಾಶಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಮೂಡುಬಿದಿರೆಯ ಸಣ್ಣ ಗ್ರಾಮದಲ್ಲಿ ನಡೆಯುತ್ತಿರುವ ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸೋಣ. ಸಂಜೆ 6 ಗಂಟೆಗೆ ನಡೆಯುವ  ಸಾಂಸ್ಕೃತಿಕ ವೈಭವಕ್ಕೂ ಸಾಕ್ಷಿಯಾಗೋಣ. ನಮ್ಮ ಊರಿನಲ್ಲಿ ನಡೆಯುತ್ತಿರುವ ಅಪರೂಪದ ಹಾಗೂ ವಿಶೇಷವಾದ ಕಾರ್ಯಕ್ರಮ ಇದಾಗಿದ್ದು ನಮ್ಮೂರ ಕಾರ್ಯಕ್ರಮವನ್ನು ವಿಜ್ರಂಭಿಸೋಣ…