ಕ್ರೀಡೆ ದೇಶ ರಾಜ್ಯ

ಅಖಿಲ ಭಾರತ ಅಂತರ್ ವಿ.ವಿ. ಭಾರ ಎತ್ತುವ ಸ್ಪರ್ಧೆ ಆಳ್ವಾಸ್‍ನ ಭವಿಷ್ಯ ಪೂಜಾರಿಗೆ ಬೆಳ್ಳಿ ಪದಕ, ಲಾವಣ್ಯ ರೈಗೆ ಪದಕ

ಮೂಡುಬಿದಿರೆ: ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರು ಇಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ಭವಿಷ್ಯ ಪೂಜಾರಿ ಬೆಳ್ಳಿ ಪದಕ ಹಾಗೂ ಲಾವಣ್ಯ ರೈ ಕಂಚಿನ ಪದಕ ಪಡೆದಿದ್ದಾರೆ.
ದ್ವಿತೀಯ ಬಿ.ಎ. ವಿದ್ಯಾರ್ಥಿನಿಯಾಗಿರುವ ಇವರಿಬ್ಬರು ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದಾರೆ. ಭವಿಷ್ಯ ಪೂಜಾರಿ ಮಂಗಳೂರು ತಾಲೂಕಿನ ಮೂಡುಶೆಡ್ಡೆ ಶಿವನಗರದ ಪ್ರೇಮಾ-ನವೀನ್ ಪೂಜಾರಿ ದಂಪತಿಯ ಪುತ್ರಿ. ಲಾವಣ್ಯ ರೈ ಅರಂಗೋಡು ಜಲಜಾಕ್ಷಿ ರೈ ಹಾಗೂ ರತ್ನಾಕರ ರೈ ದಂಪತಿಯ ಪುತ್ರಿ. ಪದಕ ವಿಜೇತ ಇಬ್ಬರು ವಿದ್ಯಾರ್ಥಿನಿಯರು ಡಿಸೆಂಬರ್ 14 ರಿಂದ ನಾಗ್ಪುರದಲ್ಲಿ ಜರಗಲಿರುವ ರಾಷ್ಟ್ರೀಯ ಜೂನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಕಾರ್ಟೂನ್ ಕೆಫೆ

ಜಾಹಿರಾತು

ನಮ್ಮನ್ನು ಬೆಂಬಲಿಸಿ

ಜಾಲತಾಣಗಳಲ್ಲಿ ವಾರ್ತೆ ತಂ‍ಡವನ್ನ ಮೆಚ್ಚುವ ಮೂಲಕ ನಮ್ಮನ್ನ ಬೆಂಬಲಿಸಿ.

ನೀವು ಏನಂತೀರಿ ?

ಕುಮಾರ ಸ್ವಾಮಿ ಸರ್ಕಾರದ ಆರು ತಿಂಗಳುಗಳ ಅಧಿಕಾರ ಸಮರ್ಥವಾಗಿ‌ನಡೆಸಿದೆಯೆ?

ಜಾಹಿರಾತು